×
Ad

ಬಿಜೆಪಿ ಹಿಂದೂ ಧರ್ಮದ ಅವಹೇಳನ ಮಾಡುತ್ತಿದೆ: ಮಮತಾ ಬ್ಯಾನರ್ಜಿ

Update: 2017-04-22 13:25 IST

ಕೊಲ್ಕತಾ, ಎ. 22: ಬಿಜೆಪಿ ಧರ್ಮಾಧಾರಿತವಾಗಿ ಜನರನ್ನು ವಿಭಜಿಸುತ್ತಿದೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ದೇಶಕ್ಕಾಗಿ ಪ್ರಾದೇಶಿಕ ಪಕ್ಷಗಳು ಒಟ್ಟುಗೂಡಬೇಕಾದ ಸಮಯ ಇದು ಎಂದು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆಯಾಗಿ ಪುನರಾಯ್ಕೆಗೊಂಡ ಬಳಿಕ ಮಾತಾಡುತ್ತಿದ್ದರು.

 ಸಹಿಷ್ಣುತೆ ಕಲಿಸುವ ಹಿಂದೂಧರ್ಮವನ್ನು ಬಿಜೆಪಿ ಅವಹೇಳನ ಮಾಡುತ್ತಿದೆ. ಗಲಭೆ ಯುಂಟು ಮಾಡುವುದು ಧರ್ಮ ಅಲ್ಲ ಎಂದು ಮಮತಾ ಹೇಳಿದರು. ನಾನು ನನ್ನ ಧರ್ಮವನ್ನೂ ಮತ್ತು ಇತರ ಧರ್ಮಗಳ ಕುರಿತು ಗೌರವಿಸುತ್ತೇನೆ. ಆದರೆ ಅದರಲ್ಲಿ ಮನುಷ್ಯನೇ ನಮಗೆ ಮೂಲ ತಳಹದಿಯಾಗಿರಬೇಕೆಂದು ಅವರು ಆಗ್ರಹಿಸಿದರು.

ಕಳೆದದಿವಸ ಮಮತಾ ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ರನ್ನು ಭೇಟಿಯಾಗಿದ್ದರು. ಅದರಲ್ಲಿಯೂ ಬಿಜೆಪಿಯನ್ನು ಎದುರಿಸಲು ಮೂರನೆ ರಂಗ ರೂಪಿಸುವ ಕುರಿತು ಮಾತುಕತೆಗಳಾಗಿವೆ.

  ಬಿಜೆಪಿಯನ್ನು ಎದುರಿಸಲು ಪ್ರಾದೇಶಿಕ ಪಕ್ಷಗಳು ಸಮರ್ಥವಾಗಿವೆ ಎಂದು ಮಮತಾ ತಿಳಿಸಿದರು. ಉತ್ತರಪ್ರದೇಶದಲ್ಲಿ ಬಿಜೆಪಿಯ ಚುನಾವಣಾ ತಂತ್ರಗಳು ಪ್ರಾದೇಶಿಕ ಪಕ್ಷಗಳಿಗೆ ಹಿನ್ನಡೆಯಾಗಿವೆಯೇ ಎಂದು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು. ಬಿಜೆಪಿ ಶಾಸಕರನ್ನು ಖರೀದಿಸಿ, ರಾಜಕೀಯ ಪಕ್ಷಗಳನ್ನು ದುರ್ಬಲಗೊಳಿಸುತ್ತಿವೆ. ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುತ್ತಿದೆಎಂದು ಮಮತಾ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News