ಆನ್‌ಲೈನ್ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ಬರಲಿದೆ ಡೀಸೆಲ್, ಪೆಟ್ರೋಲ್!
Update: 2017-04-22 13:41 IST
ಹೊಸದಿಲ್ಲಿ, ಎ.22: ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲೋತ್ಪನ್ನಗಳಿಗಾಗಿ ಸರತಿ ಸಾಲಲ್ಲಿ ನಿಲ್ಲುವ ಪ್ರಮೇಯ ಇರದು. ಪೆಟ್ರೋಲ್, ಡೀಸೆಲ್‌ಬೇಕಿದ್ದಲ್ಲಿ ಆನ್‌ಲೈನ್ ಆರ್ಡರ್ ಮಾಡಿದರೆ ಸಾಕು. ಸಮೀಪದ ಪೆಟ್ರೋಲ್ ಬಂಕ್‌ಗಳು ಮನೆ ಬಾಗಿಲಿಗೆ ತಂದುಕೊಡಲಿದ್ದಾರೆ.!
ಇಂತಹ ಮಹತ್ವದ ಬದಲಾವಣೆಯೊಂದರ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ತೈಲ ಸಚಿವಾಲಯವು ತೈಲ ಪೂರೈಕೆಯ ಕಂಪೆನಿಗಳೊಂದಿಗೆ ಚರ್ಚಿಸಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಇದೇ ವಿಚಾರವಾಗಿ ತೈಲ ಸಚಿವಾಲಯವು ಟ್ವಿಟ್ಟರ್ ಮೂಲಕ ಜನಾಭಿಪ್ರಾಯ ಸಂಗ್ರಹಕ್ಕೂ ಮುಂದಾಗಿದೆ.
ಐಒಸಿ, ಬಿಪಿಸಿಎಲ್, ಎಚ್‌ಪಿಸಿಎಲ್ ಈಗಾಗಲೇ ನಗದುರಹಿತ ವಹಿವಾಟಿಗೆ ಶೇ.75ರಷ್ಟು ರಿಯಾಯಿತಿ ನೀಡುತ್ತಿವೆ. ಪ್ರತೀದಿನ ನಗದುರಹಿತ ವಹಿವಾಟಿನಿಂದ 150 ಕೋ.ರೂ.ನಿದ 400 ಕೋ.ರೂ.ನಷ್ಟು ಆದಾಯ ಹೆಚ್ಚಿದೆ ಎಂದು ತೈಲ ಸಚಿವಾಲಯ ಹೇಳಿಕೊಂಡಿದೆ.