9ವರ್ಷದ ಬಾಲಕಿ ಸಹಿತ 5 ಮಂದಿಗೆ ಗೋಸಂರಕ್ಷಕರಿಂದ ಮಾರಾಣಾಂತಿಕ ಹಲ್ಲೆ
Update: 2017-04-22 13:57 IST
ಶ್ರೀನಗರ, ಎ. 22: 9 ವರ್ಷದ ಪುಟ್ಟಬಾಲಕಿ ಸಹಿತ ಐವರಿಗೆ ಕಾಶ್ಮೀರದಲ್ಲಿ ಗೋಸಂರಕ್ಷಕರು ಮಾರಣಾಂತಿಕವಾಗಿ ಹೊಡೆದಿದ್ದಾರೆ. ಗೊರಕ್ಷಕಾಸ್ ಎನ್ನುವ ಸಂಘಟನೆಯ ಕಾರ್ಯಕರ್ತರು ರಿಯಾಸಿ ಜಿಲ್ಲೆಯಲ್ಲಿ ಒಂದು ಕುಟುಂಬ ಸದಸ್ಯರ ವಿರುದ್ಧ ಹಲ್ಲೆ ನಡೆಸಿದ್ದಾರೆ.
ತಮ್ಮ ಜಾನುವಾರುಗಳನ್ನು ಕೊಂಡು ಹೋಗುತ್ತಿದ್ದ ವೇಳೆ ಗೋ ರಕ್ಷಕಾಸ್ ಸೇನೆಯ ಕಾರ್ಯಕರ್ತರು ದಾಳಿ ನಡೆಸಿದರೆಂದು ಕುಟುಂಬ ಪೊಲೀಸರಿಗೆ ಹೇಳಿಕೆ ನೀಡಿದೆ. ದುಷ್ಕರ್ಮಿಗಳು ಇವರ ಜಾನುವಾರುಗಳನ್ನು ಕಿತ್ತೊಯ್ದಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಐವರು ದುಷ್ಕರ್ಮಿಗಳ ಸುಳಿವು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.