ರಾಷ್ಟ್ರೀಯವಾದ ಮೂರ್ಖತನದ ಸಂಕೇತ. : ಸಾಹಿತಿ ನಯನಾ ತಾರಾ ಸೆಹಗಲ್

Update: 2017-04-24 07:30 GMT

ಡೆಹ್ರಾಡೂನ್, ಎ. 24: ಇಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯ ಮಹೋತ್ಸವ "ಡಬ್ಲ್ಯು ಐಸಿ ಇಂಡಿಯ ಡೆಹ್ರಾಡೂನ್ ಲಿಟರೇಚರ್ ಫೆಸ್ಚಿವಲ್"ನಲ್ಲಿ ಭಾಗವಹಿಸಿ ಮಾತಾಡಿದ ಹಿರಿಯ ಸಾಹಿತಿ ನಯನಾತಾರಾ ಸೆಹಗಲ್‌ ರಾಷ್ಟ್ರೀಯವಾದವನ್ನು ಅಪ್ರಾಸಂಗಿಕ ಮತ್ತು ಮೂರ್ಖತೆಯ ಚಿಹ್ನೆಯಾಗಿದೆ ಎಂದು ವಿಶ್ಲೇಷಿಸಿದ್ದಾರೆ.

ದೇಶ ಎಪ್ಪತ್ತುವರ್ಷಗಳಿಂದ ಸ್ವತಂತ್ರವಾಗಿದೆ. ಅದರಲ್ಲಿ ರಾಷ್ಟ್ರೀಯವಾದದ ಘೋಷಣೆ ಕೂಗುವ ಅಗತ್ಯವಿಲ್ಲ. ಇಂದು ಅಧಿಕಾರದಲ್ಲಿ ಕುಳಿತಿರುವ ಜನರು ರಾಷ್ಟ್ರೀಯವಾದದ ಘೋಷಣೆ ಕೂಗುತಿದ್ದಾರೆ. ದೇಶಸ್ವಾತಂತ್ರ್ಯ ಆಂದೋಲನದಲ್ಲಿ ಇವರು ಎಲ್ಲಿಯೂ ಕಂಡು ಬಂದಿರಲಿಲ್ಲ. ಅವರು ಆಗ ಹಾಸಿಗೆಯಲ್ಲಿಆರಾಮವಾಗಿ ಮಲಗಿ ವಿಶ್ರಾಂತಿಪಡೆಯುತ್ತಿದ್ದರುಎಂದು ಸೆಹಗಲ್ ಟೀಕಿಸಿದರು.

ಅಧಿಕಾರದಲ್ಲಿರುವವರು ತಮ್ಮ ವಿಚಾರಧಾರೆಯನ್ನು ಅಂದರೆ ಅವರ ಹಿಂದುತ್ವ ವಿಚಾರಧಾರೆಯನ್ನು, ಅವರು ನೀಡಿದ ವ್ಯಾಖ್ಯಾನದಂತೆ ಒಪ್ಪಿಕೊಳ್ಳಬೇಕೆಂದು ಬಯಸುತ್ತಾರೆ. ಒಂದು ವೇಳೆ ಒಪ್ಪಿಕೊಳ್ಳದಿದ್ದರೆ ಅಂತಹವರಿಗೆ ಇಲ್ಲಿ ಏನೂ ಸಿಗಲಿಕ್ಕಿಲ್ಲ. ಹೀಗೆ ಭಾರತ ದಬ್ಬಾಳಿಕೆಯ ಪರ್ವದಲ್ಲಿ ಹಾದುಹೋಗುತ್ತಿದೆ. ಮುಸ್ಲಿಮರು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಳ್ಳಲಾಗಿದೆ ಎಂದು ನಯನಾ ತಾರಾ ಸೆಹಗಲ್ ಹೇಳಿದರು.

ಪ್ರಶಸ್ತಿ ಮರಳಿಸಿದ್ದರ ಕುರಿತು ವಿವರಸಿದ ಸೆಹಗಲ್ ಮೂವರು ವಿಚಾರವಾದಿಗಳನ್ನು ಹತ್ಯೆ ಮಾಡಲಾಗಿದೆ. ಇದರಿಂದ ತುಂಬ ದುಃಖವಾಗಿದೆ. ಆದರೆ ಸಾಹಿತ್ಯ ಅಕಾಡಮಿ ಮೌನವಹಿಸಿತು. ಆದ್ದರಿಂದ ನಾವು ಪ್ರಶಸ್ತಿಯನ್ನು ಮರಳಿಸಿದ್ದೆವು ಎಂದು ವಿವರಿಸಿದರು. ನಯನಾತಾರಾ ಸೆಹಗಲ್ ದೇಶದಲ್ಲಿ ಅಸಹಿಷ್ಣುತೆಯ ಹಾವಳಿ ವ್ಯಾಪಕಗೊಂಡ ಸಮಯದಲ್ಲಿ ಪ್ರಶಸ್ತಿ ಮರಳಿಸಿದ್ದ ಸಾಹಿತಿಗಳಲ್ಲಿ ಒಬ್ಬರು ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News