ಭಾರತದ 101ರ ಹರೆಯದ ಕೌರ್ ಗೆ 100ಮೀ ಓಟದಲ್ಲಿ ಚಿನ್ನ

Update: 2017-04-24 07:42 GMT

ಆಕ್ಲೆಂಡ್‌, ಎ.24: ಭಾರತದ 101ರ ಹರೆಯದ ಮಹಿಳಾ ಅಥ್ಲೀಟ್‌ ಮನ್ ಕೌರ್‌ ನ್ಯೂಝಿಲೆಂಡ್ ನ ಆಕ್ಲೆಂಡ್‌ ನಲ್ಲಿ ಸೋಮವಾರ ನಡೆದ  ವರ್ಲ್ಡ್‌ ಮಾಸ್ಟರ್ಸ್  ಗೇಮ್ಸ್ ನ ಶತಾಯುಷಿ ಅಥ್ಲೀಟ್ ಗಳ ವಿಭಾಗದ 100 ಮೀಟರ್‌  ಓಟದ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದಾರೆ.
ಕೌರ್‌ 1 ನಿಮಿಷ ಮತ್ತು 14 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಮತ್ತೊಮ್ಮೆ ಚಿನ್ನ ಗೆದ್ದುಕೊಂಡಿದ್ದಾರೆ. ಈ ವಿಭಾಗದಲ್ಲಿ ಇದ್ದ ಏಕೈಕ  ಸ್ಪರ್ಧಿ ಕೌರ್‌ ಚಿನ್ನ ಜಯಿಸಿ ತನ್ನ ವೃತ್ತಿ ಬದುಕಿನಲ್ಲಿ ಪಡೆದಿರುವ ಪದಕಗಳ ಸಂಖ್ಯೆಯನ್ನು 17ಕ್ಕೆ ಏರಿಸಿದ್ದಾರೆ.
ಕೌರ್  8 ವರ್ಷಗಳ ಹಿಂದೆ ಮಗನ ಸಲಹೆಯಂತೆ ಅಥ್ಲೆಟಿಕ್ಸ್‌ ಪ್ರವೇಶಿಸಿದ್ದರು. ಆಗ ಅವರ ವಯಸ್ಸು 93 ಆಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News