ಸೆನ್‌ಕುಮಾರ್ ಪರ ತೀರ್ಪಿನ ಪ್ರತಿ ಬರಲಿ; ಕಾನೂನುಪ್ರಕಾರ ಮಾಡುವುದೆಲ್ಲವನ್ನೂ ಮಾಡುತ್ತೇವೆ- ಪಿಣರಾಯಿ

Update: 2017-04-24 10:14 GMT

ಕಣ್ಣೂರ್, ಎ. 24: ಟಿ.ಪಿ. ಸೆನ್‌ಕುಮಾರ್‌ರಿಗೆ ಸಂಬಂಧಿಸಿದ ಸುಪ್ರೀಂಕೋರ್ಟು ಪೂರ್ಣವಾಗಿ ಬರಲಿ, ಆಗ ಕಾನೂನುಪ್ರಕಾರ ಏನೆಲ್ಲ ಮಾಡಬಹುದು , ಅದನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಪಿಣರಾಯಿವಿಜಯನ್ ಪ್ರತಿಕ್ರಿಯಿಸಿದ್ದಾರೆ.

   ನಮ್ಮದು ಕಾನೂನುಪ್ರಕಾರ ಆಳ್ವಿಕೆ ಇರುವ ದೇಶವಾಗಿದೆ. ಸರಕಾರ ಕೈಗೊಳ್ಳಬೇಕಾದ್ದೆಲ್ಲವನ್ನೂ ಕಾನೂನುಪ್ರಕಾರ ಕೈಗೊಳ್ಳುತ್ತದೆ. ಅದನ್ನು ಪರಿಶೀಲಿಸುವ ಕೆಲಸವನ್ನು ನ್ಯಾಯಾಲಯ ಮಾಡುತ್ತವೆ. ಆಡಳಿತ ರಂಗದಲ್ಲಿ ಕ್ರಮಗಳನ್ನು ಕೈಗೊಳ್ಳುವುದು ಸರಕಾರದ ಸಹಜ ಕ್ರಿಯೆ ಆಗಿದೆ ಎಂದು ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸೆನ್‌ಕುಮಾರ್‌ರಿಗೆ ಡಿಜಿಪಿ ಹುದ್ದೆಯನ್ನು ನೀಡಬೇಕೆಂದು ಸುಪ್ರೀಂಕೋರ್ಟು ತೀರ್ಪು ಪ್ರಕಟಗೊಂಡ ನಂತರ ಮುಖ್ಯಮಂತ್ರಿ ಮಾಧ್ಯಮಗಳೊಂದಿಗೆ ಮಾತಾಡುತ್ತಿದ್ದರು.

   ತೀರ್ಪು ಪ್ರಕಟಗೊಂಡ ಬಳಿಕ ಲೋಕನಾಥ್ ಬೆಹ್ರಾ ಮುಖ್ಯಮಂತ್ರಿಯವರನ್ನು ಭೇಟಿ ಯಾಗಿದ್ದಾರೆ. ಮುಖ್ಯಮಂತ್ರಿಯ ಪೊಲೀಸ್ ಸಲಹೆಗಾರ ರಮಣ್ ಶ್ರೀವಾಸ್ತವರನ್ನು ಕೂಡಾ ಭೇಟಿವೇಳೆ ಉಪಸ್ಥಿತರಿದ್ದರು. ಪುಟ್ಟಿಂಗಲ್ ಪ್ರಕರಣ, ಜಿಶಾ ಕೊಲೆಪ್ರಕರಣಗಳನ್ನು ಬೆಟ್ಟುಮಾಡಿ ಟಿ.ಪಿ. ಸೆನ್‌ಕುಮಾರ್ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಕೇರಳ ಸರಕಾರ ವಾದಿಸಿದರೂ ಸುಪ್ರೀಂಕೋರ್ಟು ಅವೆಲ್ಲವನ್ನೂ ತಳ್ಳಿಹಾಕಿ ಸೆನ್ ಕುಮಾರ್‌ರನ್ನು ಪೊಲೀಸ್ ಮುಖ್ಯಸ್ಥನ ಸ್ಥಾನಕ್ಕೆ ನೇಮಕಗೊಳಿಸಬೇಕೆಂದು ತೀರ್ಪು ನೀಡಿದೆ. ಪಿಣರಾಯಿ ವಿಜಯನ್‌ರು ಅಧಿಕಾರವಹಿಸಿಕೊಂಡ ಆರೇ ದಿನದಲ್ಲಿ ಟಿ.ಪಿ. ಸೆನ್‌ಕುಮಾರ್‌ನ್ನು ಡಿಜಿಪಿ ಹುದ್ದೆಯಿಂದ ಕಿತ್ತುಹಾಕಿ ಲೋಕ್‌ನಾಥ್ ಬೆಹ್ರಾರನ್ನು ನೇಮಕಗೊಳಿಸಲಾಗಿತ್ತು.

ಸೆನ್ ಕುಮಾರ್ ಪರಬಂದ ತೀರ್ಪನ್ನು ಕೂಡಲೇ ಜಾರಿಗೊಳಿಸಬೇಕು: ವಿ.ಎಸ್

 ತಿರುವನಂತಪುರಂ,ಎ.24: ಸುಪ್ರೀಂಕೋರ್ಟು ಟಿ.ಪಿ.ಸೆನ್‌ಕುಮಾರ್‌ರನ್ನು ಪೊಲೀಸ್ ಮುಖ್ಯಸ್ಥನ ಸ್ಥಾನಕ್ಕೆ ನೇಮಕಗೊಳಿಸಬೇಕೆಂದು ನೀಡಿದ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ವಿಎಸ್ ಅಚ್ಯುತಾನಂದನ್ ಕೂಡಲೆ ತೀರ್ಪುಜಾರಿಗೊಳಿಸಬೇಕಾಗಿದೆ ಎಂದಿದ್ದಾರೆ.

 ಪತ್ರಕರ್ತರೊಂದಿಗೆ ಮಾತಾಡಿದವರು ಈ ಕುರಿತು ಹೆಚ್ಚಿನ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ. ಮಾಜಿಮುಖ್ಯಮಂತ್ರಿ ಉಮ್ಮನ್ ಚಾಂಡಿ, ಮಾಜಿಗೃಹಸಚಿವ ತಿರುವಾಂಕೂರ್ ರಾಧಾಕೃಷ್ಣನ್ ತೀರ್ಪನ್ನು ಸ್ವಾಗತಿಸಿದ್ದಾರೆ.

  ಸೋಮವಾರ ಬೆಳಗ್ಗೆ ಸುಪ್ರೀಂ ಕೋರ್ಟು ಕೇರಳ ರಾಜ್ಯ ಸರಕಾರಕ್ಕೆ ತಿರುಗೇಟು ಆದ ತೀರ್ಪನ್ನು ಪ್ರಕಟಿಸಿದೆ. . ಸರಕಾರ ಸೆನ್ ಕುಮಾರ್ ವಿರುದ್ಧ ಮಂಡಿಸಿದ್ದ ವಾದಗಳನ್ನು ತಳ್ಳಿಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News