ಇನ್ನು ದನಗಳಿಗೂ ಆಧಾರ್ ಸಂಖ್ಯೆ !

Update: 2017-04-24 11:44 GMT

ಹೊಸದಿಲ್ಲಿ, ಎ.24: ಭಾರತದಲ್ಲಿರುವ ಪ್ರತಿಯೊಂದು ದನ ಮತ್ತು ಅದರ ತಳಿಯನ್ನು ಗುರುತಿಸುವುದಕ್ಕಾಗಿ   ಅನನ್ಯ ಗುರುತಿನ ಸಂಖ್ಯೆ(ಆಧಾರ್) ನೀಡಿದರೆ ಜಾನುವಾರುಗಳ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಲು ಸಾಧ್ಯ ಎಂದು ‌ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಇಂದು ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.
ಭಾರತ-ಬಾಂಗ್ಲಾ ಗಡಿ ಪ್ರದೇಶದಲ್ಲಿ ದನಗಳ ರಕ್ಷಣೆ ಮತ್ತು ಜಾನುವಾರುಗಳ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟುವ ಬಗ್ಗೆ ಸುಪ್ರೀಂ ಕೋರ್ಟ್‌‌ಗೆ  ಕೇಂದ್ರ ಸರಕಾರ ಇಂದು ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಪರಿತ್ಯಕ್ತ ಜಾನುವಾರುಗಳ   ರಕ್ಷಣೆ ರಾಜ್ಯ ಸರಕಾರಗಳ ಜವಾಬ್ದಾರಿಯಾಗಿದೆ. ಪ್ರತಿಯೊಂದು ಜಿಲ್ಲೆಗಳಲ್ಲೂ ಪರಿತ್ಯಕ್ತ ಐನೂರು ಜಾನುವಾರುಗಳಿಗೆ  ಅವಕಾಶವಿರುವ ಆಶ್ರಯ ತಾಣಗಳನ್ನು ಕಲ್ಪಿಸಬೇಕಾದ ಅಗತ್ಯತೆ ಇದೆ’' ಎಂದು ಹೇಳಿದೆ.
ಹಾಲು ನೀಡುವ ಪ್ರಾಯ ಮೀರಿದ ದನಗಳ  ಆರೈಕೆಗೆ ರೈತರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಬೇಕಾಗಿದೆ  ಎಂದು ಕೇಂದ್ರ ಸರಕಾರ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News