ಆಗಸ್ಟ್‌ 15ರಿಂದ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟಿನ್‌ ಆರಂಭ

Update: 2017-04-25 14:37 GMT

ಬೆಂಗಳೂರು , ಎ.25: ತಮಿಳುನಾಡಿನ "ಅಮ್ಮಾ ಕ್ಯಾಂಟಿನ್‌ "ಮಾದರಿಯಲ್ಲಿ ಬೆಂಗಳೂರಿನ ಬಿಬಿಎಂಪಿಯ ಎಲ್ಲ ವಾರ್ಡ್‌‌ಗಳಲ್ಲೂ ಜಾರಿಗೊಳಿಸಲಿರುವ ಕರ್ನಾಟಕ ಸರಕಾರದ ಮಹತ್ದದ ಯೋಜನೆಯಾಗಿರುವ "ಇಂದಿರಾ ಕಾಂಟೀನ್‌’' ಮುಂಬರುವ ಆಗಸ್ಟ್‌ 15ರಿಂದ ಕಾರ್ಯಾರಂಭ ಮಾಡಲಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿ ಕ್ಯಾಂಟಿನ್‌ ಪ್ರಾರಂಭಿಸಲು 7.5 ಲಕ್ಷ ರೂ. ವೆಚ್ಚವಾಗಲಿದೆ. ಈಗಾಗಲೇ 140 ಕ್ಯಾಂಟಿನ್‌ಗಳ ಪ್ರಾರಂಭಿಸಲು ಜಾಗ ಗುರುತಿಸಲಾಗಿದೆ ಎಂದರು.
5 ರೂ.ಗೆ ಬೆಳಗ್ಗಿನ ಟಿಫನ್ , 10ರೂ.ಗೆ ಮಧ್ಯಾಹ್ನ, ರಾತ್ರಿಯ ಊಟವನ್ನು ಇಂದಿರಾ ಕ್ಯಾಂಟಿನ್‌ನಲ್ಲಿ ನೀಡಲಾಗುವುದು. ಆಹಾರದ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು.ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ.  ಇಸ್ಕಾನ್‌ಗೆ ಅಡುಗೆ ಟೆಂಡರ್ ನೀಡುವ ಬಗ್ಗೆ ಪರಿಗಣಿಸಿಲ್ಲಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

, ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟಿನ್‌ನ ಕೇಂದ್ರೀಕೃತ ಅಡುಗೆಮನೆ ಇರುತ್ತದೆ .ಲ್ಯಾಂಡ್‌ ಆರ್ಮಿಯಿಂದ ಇಂದಿರಾ ಕ್ಯಾಂಟಿನ್‌ಗೆ ಕಟ್ಟಡ ನಿರ್ಮಿಸಲಾಗುವುದು. ಕಟ್ಟಡ 500ಚದರ ಅಡಿ ವಿಸ್ತೀರ್ಣ ಹೊಂದಿರುತ್ತದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News