×
Ad

ಬೆಳ್ಳಿತೆರೆಯಲ್ಲಿ ಕ್ರಿಕೆಟ್ ದಂತಕಥೆ ಸಚಿನ್

Update: 2017-04-28 18:59 IST

ಸಿನೆಮಾ ಪ್ರೇಮಿಗಳ ಜೊತೆಗೆ ಕ್ರಿಕೆಟ್ ಪ್ರಿಯರೂ ಕೂಡಾ ಕುತೂಹಲದಿಂದ ನಿರೀಕ್ಷಿಸುತ್ತಿರುವ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಹೌದು. ಕ್ರಿಕೆಟ್ ಜಗತ್ತಿನ ಜೀವಂತ ದಂತಕಥೆ ಸಚಿವ್ ತೆಂಡುಲ್ಕರ್ ಅವರ ಕುರಿತಾದ ಬಯೋಪಿಕ್ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ‘ಸಚಿನ್ ಎ ಬಿಲಿಯನ್ ಡ್ರೀಮ್ಸ್’ ಎಂಬ ಹೆಸರಿನ ಈ ಚಿತ್ರದ ಟ್ರೈಲರ್‌ನಲ್ಲಿ ಸಚಿನ್ ತನ್ನ ಸಹೋದರನ ಜೊತೆಗೆ ಕಳೆದ ಕೆಲವು ಸ್ವಾರಸ್ಯಕರ ಸನ್ನಿವೇಶಗಳು ಹಾಗೂ ಅವರು ಆಡಿದ ಕೆಲವು ಅವಿಸ್ಮರಣೀಯ ಪಂದ್ಯಗಳ ರೋಚಕ ದೃಶ್ಯಗಳೂ ಟ್ರೇಲರ್‌ನಲ್ಲಿ ಮೂಡಿಬಂದಿವೆ.

ಸಚಿನ್ ಅವರ ಕ್ರಿಕೆಟ್ ಹಾಗೂ ವೈಯಕ್ತಿಕ ಬದುಕನ್ನು ವಿಸ್ತೃತವಾಗಿ ಈ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ಸ್ವತಃ ಸಚಿನ್ ತೆಂಡುಲ್ಕರ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಸಚಿನ್ ಅವರ ಅದ್ಭುತ ಆಟದ ಅನೇಕ ದೃಶ್ಯಗಳಿದ್ದು, ಅವರ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಲಿದೆಯೆಂಬ ಮಾತುಗಳು ಬಾಲಿವುಡ್‌ನಲ್ಲಿ ಕೇಳಿಬರುತ್ತಿವೆ.

ಸಚಿವ್ ಜೊತೆಗೆ ಅವರ ಪತ್ನಿ ಅಂಜಲಿ, ವಿರೇಂದ್ರ ಸೆಹ್ವಾಗ್, ಧೋನಿ ಕೂಡಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಸರಿ ಹೋದಲ್ಲಿ ಸಚಿನ್ ಎ ಬಿಲಿಯನ್ ಡ್ರೀಮ್ಸ್ ಮೇನಲ್ಲಿ ತೆರೆ ಕಾಣಲಿದೆ. ಸಚಿನ್ ಎ ಬಿಲಿಯನ್ ಚಿತ್ರದ ಪ್ರದರ್ಶನದ ಹಕ್ಕುಗಳು ಬಿಡುಗಡೆಗೆ ಮುನ್ನವೇ ಭಾರೀ ಬೆಲೆಗೆ ಮಾರಾಟವಾಗಿವೆಯಂತೆ. ಜೇಮ್ಸ್ ಎರಸ್‌ಕೈನ್ ನಿರ್ದೇಶನದ ಈ ಚಿತ್ರಕೆ ಎ.ಆರ್.ರಹ್ಮಾನ್ ಸಂಗೀತವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News