×
Ad

ಜೆಟ್ಟಿ ಕುಸಿತ ಪ್ರಕರಣ: ಸತ್ತವರ ಸಂಖ್ಯೆ 13ಕ್ಕೆ ಏರಿಕೆ

Update: 2017-04-28 20:21 IST

 ಹೂಗ್ಲಿ, ಎ.28: ಭದ್ರೇಶ್ವರ ಎಂಬಲ್ಲಿ ಹೂಗ್ಲಿ ನದಿ ದಾಟಲು ಬಳಸಲಾಗುತ್ತಿದ್ದ ಬಿದಿರಿನಿಂದ ರಚಿಸಿದ್ದ ಜೆಟ್ಟಿ (ದಂಡೆ) ಕುಸಿದುಬಿದ್ದ ಘಟನೆ ಬುಧವಾರ ನಡೆದಿದ್ದು ಶುಕ್ರವಾರ ಮತ್ತೆ ಏಳು ಶವಗಳನ್ನು ಪತ್ತೆ ಹಚ್ಚುವುದರೊಂದಿಗೆ ಈ ಘಟನೆಯಲ್ಲಿ ಸತ್ತವರ ಸಂಖ್ಯೆ 13ಕ್ಕೆ ಏರಿದೆ.

 ಬುಧವಾರ ನದಿಯಲ್ಲಿ ಭಾರೀ ಅಲೆಯಬ್ಬರ ಕಾಣಿಸಿಕೊಂಡಾಗ ಜೆಟ್ಟಿಯ ಒಂದು ಭಾಗ ಕುಸಿದುಬಿದ್ದಿತ್ತು. ಈ ವೇಳೆ ಜೆಟ್ಟಿಯಲ್ಲಿ ನಿಂತು ದೋಣಿ ಏರಲು ಕಾಯುತ್ತಿದ್ದ ಜನರು ನೀರಿಗೆ ಬಿದ್ದಿದ್ದರು. ಆರು ಮಂದಿಯ ಮೃತದೇಹ ಈಗಾಗಲೇ ಪತ್ತೆಯಾಗಿದ್ದು ಇನ್ನೂ ಐದು ಮಂದಿ ನಾಪತ್ತೆಯಾಗಿದ್ದಾರೆ . ಜೆಟ್ಟಿಯ ಗುತ್ತಿಗೆ ವಹಿಸಿಕೊಂಡ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News