ಮುಸ್ಲಿಂ ಯುವಕರ ದಾರಿತಪ್ಪಿಸುವ ತೆಲಂಗಾಣ ಪೊಲೀಸರು: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿವಾದಾತ್ಮಕ ಹೇಳಿಕೆ
Update: 2017-05-01 20:54 IST
ಹೈದರಾಬಾದ್ , ಮೇ 1: ತೆಲಂಗಾಣ ಪೊಲೀಸರು ಬೋಗಸ್ ಐಸಿಸ್ ವೆಬ್ ಸೈಟ್ ಒಂದನ್ನು ರೂಪಿಸಿ ಮೂಲಕ ಮುಸ್ಲಿಂ ಯುವಕರನ್ನು ಉಗ್ರ ಸಂಘಟನೆ ಐಸಿಸ್ ಸೇರಲು ಪ್ರೇರೆಪಿಸುತ್ತಿದ್ದಾರೆಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡುವ ಮೂಲಕ ಅವರು ಹೊಸದೊಂದು ವಿವಾದವನ್ನುಟು ಮಾಡಿದ್ಧಾರೆ.
ತೆಲಂಗಾಣ ಪೊಲೀಸರು ನೀಡಿರುವ ಮಾಹಿತಿಯಿಂದಲೇ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ರೈಲಿನಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕ ಸಂಬಂಧಿಸಿ ಆರೋಪಿಗಳನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ' ಎಂದು ದಿಗ್ವಿಜಯ್ ಸಿಂಗ್ ಟ್ವೀಟರ್ ನಲ್ಲಿ ಹೇಳಿದ್ದಾರೆ.
ಈ ರೀತಿಯ ಪ್ರಚೋದನೆ ನೀಡುವ ಮಾಹಿತಿಗಳಿಂದ ತೆಲಂಗಾಣ ಪೊಲೀಸರು ಮುಸ್ಲಿಂ ಯುವಕರನ್ನು ಐಸಿಸ್ ಸೇರುವಂತೆ ಮಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.