×
Ad

ಮಮ್ಮುಟ್ಟಿ 'ಸಿ ಗ್ರೇಡ್ ನಟ' : ಕೆಆರ್‌ಕೆ ಟೀಕೆ

Update: 2017-05-02 11:37 IST

ಮುಂಬೈ,ಮೇ 2: ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್‌ರನ್ನು ‘ಛೋಟಾ ಭೀಮ್’ ಎಂದು ಅಪಹಾಸ್ಯ ಮಾಡಿದ್ದ ಸಿನೆಮಾ ನಿರೂಪಕ ಹಾಗೂ ನಟ ಕಮಾಲ್ ರಶೀದ್ ಖಾನ್ ಮೆಗಾ ಸ್ಟಾರ್ ಮಮ್ಮುಟ್ಟಿಯವರು  ‘ಸಿ ಗ್ರೇಡ್ ನಟ’ ಎಂದು ಟ್ವೀಟ್ ಮಾಡಿದ್ದಾರೆ.

" ಮೋಹನ್‌ಲಾಲ್, ನಿಮ್ಮನ್ನು ಟೀಕಿಸಲು ಮಮ್ಮುಟ್ಟಿ ನನಗೆ ಹಣ ಕೊಟ್ಟಿದ್ದಾರೆ ಎಂದು ಯಾರಲ್ಲಾದರೂ ಕೇಳಿದ್ದೀರಾ. ಆ ‘ಸಿಗ್ರೇಡ್’ ನಟನ ಬಗ್ಗೆ ನನಗೆ ಗೊತ್ತೇ ಇಲ್ಲ" ಎಂದು ಕೆಆರ್‌ಕೆ ಟ್ವೀಟ್ ಮಾಡಿದ್ದಾರೆ.

 ಎಂ ಟಿವಾಸುದೇವನ್ ನಾಯರ್‌ರ ಪ್ರಸಿದ್ಧ ಕಾದಂಬರಿಯೊಂದನ್ನು ಆಧಾರವಾಗಿಟ್ಟು ನಿರ್ಮಾಣಗೊಳ್ಳುತ್ತಿರುವ ‘ಮಹಾಭಾರತ’ ಸಿನೆಮಾದ ಅಧಿಕೃತ ಘೋಷಣೆ ಯಾದ ಬೆನ್ನಿಗೆ ಕೆಆರ್‌ಕೆ ಟೀಕೆಗಳ ಸರಮಾಲೆ ಹರಿಸಿದ್ದಾರೆ  "ಛೋಟಾ ಭೀಮನಂತಿರುವ ಮೋಹನ್‌ಲಾಲ್ ಹೇಗೆ ಭೀಮನಾಗುತ್ತಾರೆ.

ಚಿತ್ರ ನಿರ್ಮಿಸಿದ ಬಿ.ಆರ್. ಶೆಟ್ಟಿ ಯಾಕೆ ಸುಮ್ಮನೆ ಹಣ ಕಳೆದುಕೊಳ್ಳುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ್ದರು . ಕೆಆರ್‌ಕೆಯನ್ನು ವಿರೋಧಿಸಿ ಮೋಹನ್‌ಲಾಲ್ ಅಭಿಮಾನಿಗಳು ಕೆಆರ್ಕೆ ಹಾಗು ಮಮ್ಮುಟ್ಟಿಯ ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ.

“ಮೋಹನ್‌ಲಾಲ್ ಭೀಮನ ಪಾತ್ರಕ್ಕೆ ಯೋಗ್ಯರಲ್ಲ. ಈ ವಿದೂಷಕ ಭೀಮನ ಪಾತ್ರ ಮಾಡಿದರೆ ಅದು ದೊಡ್ಡ ಅಪಮಾನವಾಗಬಹುದು.ಬಾಹುಬಲಿಯ ತಾರೆ ಪ್ರಭಾಸ್ ಮಹಾಭಾರತದ ಭೀಮ ಆಗಲು ಯೋಗ್ಯ ವ್ಯಕ್ತಿ ಜೊತೆಗೆ ಕೃಷ್ಣನಾಗಿ ಅಭಿನಯಿಸಲು ತಾನು ಬಯಸುತ್ತೇನೆ. ಯಾಕೆಂದರೆ ಕೃಷ್ಣ ಮತ್ತು ನಾನು ಉತ್ತರ ಪ್ರದೇಶದಲ್ಲಿ ಹುಟ್ಟಿದವರು” ಎಂದು ಹೇಳಿಕೊಂಡಿದ್ದಾರೆ.

ಪ್ರತಿಭಟನೆ ಕಾವೇರಿದ್ದನ್ನು ನೋಡಿ ಮೋಹನ್‌ಲಾಲ್‌ರನ್ನು ಛೋಟಾ ಭೀಮ್ ಎಂದು ಕರೆದದ್ದಕ್ಕೆ ಕ್ಷಮೆಯನ್ನುಕೂಡಾ ಕೆಆರ್ಕೆ ಕೇಳಿದ್ದಾರೆ. ಮೋಹನ್‌ಲಾಲ್‌ರ ಕುರಿತು ತನಗೆ ಹೆಚ್ಚೇನು ಗೊತ್ತಿರಲಿಲ್ಲ. ಲಾಲ್ ಮಲಯಾಳಂ ಸಿನೆಮಾ ಸೂಪರ್ ಸ್ಟಾರ್ ಎಂದು ಈಗ ಮನದಟ್ಟಾಯಿತೆಂದು ಕೆಆರ್‌ಕೆ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News