×
Ad

ಬೀಫ್ ತಿನಿಸಿನ ಬಗ್ಗೆ ಕಾಜೋಲ್ ಸ್ಪಷ್ಟೀಕರಣ

Update: 2017-05-02 13:47 IST

ಮುಂಬೈ,ಮೇ.2 : ವೈರಲ್ ಗೊಂಡಿರುವ ವೀಡಿಯೊವೊಂದು ಬಾಲಿವುಡ್ ನಟಿ ಕಾಜೋಲ್ ತನ್ನ ಸ್ನೇಹಿತರೊಂದಿಗೆ ಊಟದ ಸಂದರ್ಭ ಬೀಫ್ ಸೇವಿಸಿದ್ದಾರೆಂಬುದನ್ನು ಸೂಚಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣದ ಗಂಭೀರತೆಯನ್ನು ಅರಿತು ನಟಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಒಂದನ್ನು ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ. ವೀಡಿಯೊದಲ್ಲಿ ಕಾಣಿಸಲಾಗಿದ್ದ ಖಾದ್ಯವನ್ನು ಎಮ್ಮೆಯ ಮಾಂಸದಿಂದ ತಯಾರಿಸಲಾಗಿತ್ತೇ ವಿನಹ ಬೀಫ್ ಅಥವಾ ಗೋಮಾಂಸದಿಂದಲ್ಲ ಎಂದು ಆಕೆ ಹೇಳಿದ್ದಾರೆ.

ನಟಿ ತಮ್ಮ ಸ್ಪಷ್ಟೀಕರಣ ಪೋಸ್ಟ್ ನಲ್ಲಿ ಹೀಗೆಂದು ಹೇಳಿದ್ದಾರೆ. ‘‘ನಾನು ನನ್ನ ಗೆಳೆಯರೊಂದಿಗೆ ಲಂಚ್ ಮಾಡುತ್ತಿರುವ ವೀಡಿಯೋದಲ್ಲಿ ಮೇಜಿನ ಮೇಲೆ ಬೀಫ್ ಖಾದ್ಯವಿದೆಯೆಂದು ಹೇಳಿದೆ. ಇದು ತಪ್ಪು. ಅದರಲ್ಲಿ ತೋರಿಸಲಾಗಿರುವುದು ಎಮ್ಮೆಯ ಮಾಂಸ ಹಾಗೂ ಇದು ಕಾನೂನುಬದ್ಧವಾಗಿ ದೊರೆಯುವ ಮಾಂಸ. ಇದೊಂದು ಸೂಕ್ಷ್ಮ ವಿಷಯವಾಗಿರುವುದರಿಂದ ಹಾಗೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಬಹುದಾಗಿರುವುದರಿಂದ ಹಾಗೂ ಇದು ನನ್ನ ಉದ್ದೇಶವಲ್ಲವಾಗಿರುವುದರಿಂದ ಈ ಸ್ಪಷ್ಟೀಕರಣ.

ರವಿವಾರ 42 ವರ್ಷದ ಕಾಜೋಲ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊವೊಂದರಲ್ಲಿ ಆಕೆಗೆ ಆಕೆಯ ಸ್ನೇಹಿತ ರಯಾನ್ ಸ್ಟೀಫನ್ ‘ಬೀಫ್ ಪೆಪ್ಪರ್ ವಾಟರ್ ವಿದ್ ಡ್ರೈ ಲೆಂಟಿಲ್ಸ್ ಎಂಡ್ ಡ್ರೈ ಬೀಫ್’ ನೀಡಿದ್ದಾಗಿ ಹೇಳಲಾಗಿತ್ತು. ಆ ವೀಡಿಯೊವನ್ನು ಕಾಜೋಲ್ ಡಿಲೀಟ್ ಮಾಡಿದ್ದರೂ ಊಟದ ಸಂದರ್ಭ ತೆಗೆಯಲಾದ ಹಲವು ಫೋಟೋಗಳು ಆಕೆಯ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈಗಲೂ ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News