ಈ ದಿನ ಭಾರತದ ಮೊದಲ ಸಿನೆಮಾ ಬಿಡುಗಡೆ
Update: 2017-05-03 00:25 IST
ಭಾರತೀಯ ಚಿತ್ರರಂಗಕ್ಕೆ ಮೇ 3 ಮಹತ್ವದ ದಿನ. 103 ವರ್ಷಗಳ ಹಿಂದೆ ಇದೇ ದಿನ ಭಾರತೀಯ ಚಿತ್ರರಂಗದ ಮೊತ್ತ ಮೊದಲ ಸಿನೆಮಾ ‘ರಾಜಾ ಹರಿಶ್ಚಂದ್ರ’ ಬಿಡುಗಡೆಯಾಗಿತ್ತು. ದುಂಡಿರಾಜ್ ಗೋವಿಂದ ಾಲ್ಕೆ ಅಥವಾ ದಾದಾ ಸಾಹೇಬ್ ಾಲ್ಕೆ ಈ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು. ಇಂದು ಚಿತ್ರೋದ್ಯಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಾಲ್ಕೆ ಹೆಸರಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ನಾಲ್ಕು ರೀಲ್‌ನ ಈ ಮೂಕಿ ಚಿತ್ರದ ಮೂಲಕ ಭಾರತದ ಚಿತ್ರೋದ್ಯಮದ ಪಯಣ ಆರಂಭವಾಯಿತು. 40 ನಿಮಿಷಗಳ ಚಿತ್ರವಿದು. ಮರಾಠಿ ಟೈಟಲ್‌ಗಳನ್ನು ಚಿತ್ರದಲ್ಲಿ ಬಳಸಲಾಗಿತ್ತು. ದತ್ತಾತ್ರೇಯ ದಾಮೋದರ್ ದಾಬ್ಕೆ ಎಂಬ ಮರಾಠಿ ರಂಗಭೂಮಿ ಕಲಾವಿದ ಹರಿಶ್ಚಂದ್ರ ಪಾತ್ರವನ್ನು ವಹಿಸಿದ್ದರು. ಾಲ್ಕೆಯನ್ನು ಭಾರತೀಯ ಚಿತ್ರೋದ್ಯಮದ ಪಿತಾಮಹ ಎಂದು ಕರೆಯುತ್ತಾರೆ. 1913 ಮೇ 3ರಂದು ಚಿತ್ರ ಬಿಡುಗಡೆಗೊಂಡಿತು.