ಕಾಬೂಲ್ ನ ಅಮೆರಿಕದ ದೂತಾವಾಸದ ಸಮೀಪ ಆತ್ಮಾಹುತಿ ಬಾಂಬ್ ದಾಳಿ; 4 ಸಾವು

Update: 2017-05-03 06:27 GMT

ಕಾಬೂಲ್, ಮೇ 3: ಅಫ್ಘಾನಿಸ್ತಾನದಲ್ಲಿರುವ ಅಮೆರಿಕದ ದೂತಾವಾಸ ಕಚೇರಿ ಸಮೀಪ ಆತ್ಮಾಹುತಿ ಬಾಂಬ್ ದಾಳಿಗೆ ನಾಲ್ವರು ಮೃತಪಟ್ಟು, 2 ಮಂದಿ ಗಾಯಗೊಂಡ ಘಟನೆ   ಇಂದು ಬೆಳಗ್ಗೆ ನಡೆದಿದೆ.
ಆತ್ಮಾಹುತಿ ಬಾಂಬರ್  ನಡೆಸಿದ ದಾಳಿಗೆ ಅಪಾರ ಸಾವು ನೋವು , ನಷ್ಟ ಸಂಭವಿಸಿದೆ. ಆನೇಕ ವಾಹನಗಳು ಹಾನಿಗೊಂಡಿವೆ.ಕಳೆದ  ವಾರ ಅಫ್ಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಅಮೆರಿಕದ ಸೇನೆ ಕಾರ್ಯಾಚರಣೆ ನಡೆಸಿರುವುದಕ್ಕೆ ಪ್ರತಿಕಾರವಾಗಿ ತಾಲಿಬಾನ್‌  ಈ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News