ಪೊಲೀಸ್ ಪೋಸ್ಟ್ ಮೇಲೆ ಉಗ್ರರ ದಾಳಿ, 5 ರೈಫಲ್ ಗಳೊಂದಿಗೆ ಪರಾರಿ!
Update: 2017-05-03 11:18 IST
ಶೋಪಿಯಾನ್ , ಮೇ 3: ಕಾಶ್ಮೀರದ ದಕ್ಷಿಣ ಶೋಪಿಯಾನ್ ನ ಕೋರ್ಟ್ ಕಾಂಪ್ಲೆಕ್ಸ್ ನ ಪೊಲೀಸ್ ಪೋಸ್ಟ್ ಮೇಲೆ ದಾಳಿ ಮಾಡಿದ ಶಂಕಿತ ಉಗ್ರರ ತಂಡ ಐದು ಶಸ್ತ್ರಗಳೊಂದಿಗೆ ಪರಾರಿಯಾಗಿರುವ ಘಟನೆ ಮಂಗಳವಾರ ತಡ ರಾತ್ರಿ ನಡೆದಿದೆ.
ಉಗ್ರರು ಎಗರಿಸಿರುವ ಐದು ಶಸ್ತ್ರಾಸ್ತ್ರಗಳ ಪೈಕಿ ನಾಲ್ಕು ಸರ್ವೀಸ್ ಇನ್ಸಾಸ್ ರೈಫಲ್ ಗಳು ಮತ್ತು 1 ಎಕೆ 47 ರೈಫಲ್ ಸೇರಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದು ಒಂದೇ ವಾರದಲ್ಲಿ ನಡೆದ ಎರಡನೇ ಘಟನೆಯಾಗಿದ್ದು, ಈ ಹಿಂದೆ ರಜೌರಿ ಪೊಲೀಸ್ ಕ್ಯಾಂಪ್ ಮೇಲೆ ಉಗ್ರರು ದಾಳಿ ಮಾಡಿ ಶಸ್ತ್ರಾಸ್ತ್ರ ದೋಚಿದ್ದರು.
ಕಳೆದ ಒಂದು ತಿಂಗಳಲ್ಲಿ ಉಗ್ರರು ಸುಮಾರು 35 ಶಸ್ತ್ರಾಸ್ತ್ರಗಳನ್ನು ದೋಚಿದ್ದು, ಈ ಪೈಕಿ 21 ಇನ್ಸಾಸ್ ರೈಫಲ್ ಮತ್ತು 12 ಎಸ್ ಎಲ್ ಆರ್, 2 ಎಕೆ 47 ರೈಫಲ್, ಒಂದು ಲಘು ಮಷಿನ್ ಗನ್ ಹಾಗೂ 3 ಕಾರ್ಬೈನ್ ಮಷಿನ್ ಗಳನ್ನು ಹೊತ್ತೊಯ್ದಿದ್ದರು.