ಪುಲ್ವಾಮಾದಲ್ಲಿ ಉಗ್ರರಿಂದ ಇನ್ನೊಂದು ಬ್ಯಾಂಕ್ ದರೋಡೆ; 5 ಲಕ್ಷ ರೂ. ಲೂಟಿ
Update: 2017-05-03 15:24 IST
ಶ್ರೀನಗರ, ಮೇ3: ಜಮ್ಮು ಮತ್ತು ಕಾಶ್ಮೀರದ ಫುಲ್ವಮಾ ಜಿಲ್ಲೆಯಲ್ಲಿ ಉಗ್ರರು ಬ್ಯಾಂಕ್ ಗೆ ನುಗ್ಗಿ ಲಕ್ಷಾಂತರ ರೂ. ಮೊತ್ತದ ಹಣವನ್ನು ದೋಚಿದ ಘಟನೆ ಇಂದು ನಡೆದಿದೆ.
ಪುಲ್ವಮಾ ಜಿಲ್ಲೆಯ ವಹೀಬಗ್ ಗ್ರಾಮದ ಎಲ್ಲಾಕ್ಯು ದೇಹಾತಿ ಬ್ಯಾಂಕ್ ಶಾಖಾ ಕಚೇರಿಗೆ ನುಗ್ಗಿದ ಉಗ್ರರು ಭಾರೀ ಮೊತ್ತದ ಹಣವನ್ನು ಎಗರಿಸಿಕೊಂಡು ಪರಾರಿಯಾಗಿದ್ದರು.
ಮೇ 1ರಂದು ಕುಲ್ಗಾಂನಲ್ಲಿ ಉಗ್ರರ ಗುಂಪೊಂದು ಬ್ಯಾಂಕ್ ವಾಹನದ ಮೇಲೆ ದಾಳಿ ಮಾಡಿ ಇಬ್ಬರು ಬ್ಯಾಂಕ್ ಸಿಬ್ಬಂದಿ ಹಾಗೂ ಐವರು ಪೊಲೀಸರನ್ನು ಕೊಂದು 50 ಲಕ್ಷ ನಗದು ದರೋಡೆ ಮಾಡಿದ್ದರು.