ರೋಗ ಪೀಡಿತ ಪತಿಯನ್ನು ಕೊಲೆಗೈದ ಪತ್ನಿ
ಪತ್ತನಪುರಂ(ಕೇರಳ),ಮೇ 3: ರೋಗಬಂದರೆ ಪತಿಸೇವೆಗೆ ಪತಿವೃತೆಯರು ಟೊಂಕ ಕಟ್ಟಿನಿಲ್ಲುತ್ತಾರೆ. ಅದರೆ ಮಹಿಳೆಯೊಬ್ಬರು ರೋಗದಿಂದ ಹಾಸಿಗೆಹಿಡಿದ ಪತಿಯನ್ನು ಮೊಬೈಲ್ ಚಾರ್ಜರ್‌ನ ವಯರ್ ಬಳಸಿ ಕೊರಳನ್ನು ಬಿಗಿದು ಕೊಂದು ಹಾಕಿದ್ದಾಳೆ.ತಲೆವೂರ್ ರಂಡಾಲುಂಮೂಡ್ ಚುಂಡಮಲ ಎನ್ನುವಲ್ಲಿನ ಸುಂದರನ್ ಆಚಾರಿ(59)ಎನ್ನುವವ ರನ್ನು ಅವರ ಪತ್ನಿವಸಂತಾ (49) ಈ ರೀತಿ ಕೊಲೆಗೈದ ಆರೋಪಿಯಾಗಿದ್ದಾರೆ.
ಕಳೆದ ಶನಿವಾರ ಸುಂದರ ಆಚಾರಿ ಮೃತಪಟ್ಟಸ್ಥಿತಿಯಲ್ಲಿ ಮನೆಯಲ್ಲಿ ಕಂಡು ಬಂದಿದ್ದರು. ಮಗಳು ಸುನೀತಾ, ಅಳಿಯ ರಾಜೇಶ್‌ರ ಜೊತೆ ಪತಿಪತ್ನಿ ವಾಸವಿದ್ದಾರೆ. ತಂದೆ ಅಲುಗಾಡುವುದಿಲ್ಲ ಎಂದು ಮಗಳಿಗೆ ವಸಂತಾ ಹೇಳಿದ್ದಾರೆ. ಆನಂತರ ವೈದ್ಯರನ್ನು ಕರೆತಂದು ತೋರಿಸಿದಾಗ ಸುಂದರ ಆಚಾರಿ ಮೃತರಾಗಿದ್ದನ್ನು ವೈದ್ಯರು ತಿಳಿಸಿದ್ದಾರೆ.
ಆದರೆ ವೈದ್ಯರಿಗೆ ಸುಂದರ ಆಚಾರಿಯ ಸಾವಿನ ಕುರಿತು ಸಂದೇಹವಾಗಿತ್ತು. ಆದ್ದರಿಂದ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ನಡುವೆ ಸುಂದರ ಆಚಾರಿಯವರ ಸಾವು ಸಹಜವಾಗಿ ನಡೆದಿದೆ ಎಂದು ಶವಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿತ್ತು. ಅಷ್ಟರಲ್ಲಿಪೊಲೀಸರುಬಂದುಮೃತದೇಹವವನು ತಗಿರುವನಂತಪುರ ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಮೃತದೇಹ ಪರಿಶೀಲಿಸಿದಾಗ ಉಸಿರುಗಟ್ಟಿಸಿ ಕೊಂದಿರುವುದು
ಪತ್ತೆಯಾಗಿತ್ತು. ವಸಂತಾರನ್ನು ವಿಚಾರಣೆಗೊಳಪಡಿಸಿದಾಗ ಕೊಲೆಯ ರಹಸ್ಯ ಬಹಿರಂಗವಾಗಿದೆ.
ಒಂದು ವರ್ಷದಿಂದ ಸುಂದರ ಆಚಾರಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಅವರು ಮಲಗಿದ್ದಲ್ಲೇ ಆಗಿದ್ದರು. ಪ್ರಾಥಮಿಕ ಆವಶ್ಯಕತೆಗಳನ್ನು ಪೂರೈಸಲು ಕೂಡಾ ಅವರಿಂದ ಆಗುತ್ತಿರಲಿಲ್ಲ. ಮಲಗಿದ್ದಲ್ಲೆ ಎಲ್ಲ ಆಗುತ್ತಿದ್ದರಿಂದ ಬೇಸತ್ತು ವಸಂತಾ ಪತಿಯನ್ನುಕೊಂದಿದ್ದಾರೆ. ಘಟನೆ ನಡೆದ ದಿನ ಮನೆಯಲ್ಲಿ ಯಾರೂ ಇರಲಿಲ್ಲ. ಮೊದಲು ದಿಂಬನ್ನು ಅಮುಕಿ ಹಿಡಿದು ಪತಿಯನ್ನು ಕೊಲ್ಲಲು ಯತ್ನಿಸಲಾಗಿದೆ. ನಂತರ ಮೊಬೈಲ್ ವಯರ್‌ನಿಂದ ಕೊರಳು ಬಿಗಿದು ಕೊಲೆಗೈದಿರುವುದನ್ನು ಆರೋಪಿ ವಿಚಾರಣೆಯವೇಳೆ ಒಪ್ಪಿಕೊಂಡಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಸಂತಾಳನ್ನು ಪುನಲೂರ್ ಕೋರ್ಟು ರಿಮಾಂಡ್ ಮಾಡಿತು. ಪುನಲೂರ್ ಎಎಸ್ಪಿ ಕಾರ್ತಿಕೇಯನ್ ಗೊಕುಲ್ ಚಂದ್, ಪತ್ತನಾಪುರಂ ಸರ್ಕಲ್ ಇನ್ಸ್‌ಪೆಕ್ಟರ್ ಎಸ್. ನಂದಕುಮಾರ್, ಕುನ್ನಿಕ್ಕೋಡ್ ಎಸ್ಸೈ ಡಿ.ಎಸ್ ಸುಮೇಶ್ ಲಾಲ್ ಮುಂತಾದವರ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.