ಸಂಬಳ ಹೆಚ್ಚಿದ್ದು ಒಂದೇ ರೂಪಾಯಿ: ಅದನ್ನು ಪ್ರಧಾನಿಗೇ ಕಳುಹಿಸಿದ ಉದ್ಯೋಗ ಖಾತರಿ ಕಾರ್ಮಿಕರು

Update: 2017-05-03 11:52 GMT

ರಾಂಚಿ,ಮೇ 2: ಜಾರ್ಖಂಡ್ ಉದ್ಯೋಗಖಾತರಿ ಯೋಜನೆಯ ಕಾರ್ಮಿಕರು, ತಮಗೆ ಕೇವಲ ಒಂದು ರೂಪಾಯಿ ಮಾತ್ರ ವೇತನ ಹೆಚ್ಚಿಸಿದ್ದನ್ನು ಪ್ರತಿಭಟಿಸಿ ಆ ಒಂದುರೂಪಾಯಿಯನ್ನು ಮುಖ್ಯಮಂತ್ರಿ ಮತ್ತು ಪ್ರಧಾನಿ ಕಳುಹಿಸಿಕೊಟ್ಟಿದ್ದಾರೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ವೇತನ 167ರೂಪಾಯಿದ್ದುದನ್ನು ಕಳೆದದಿನ ಸರಕಾರ ಒಂದು ರೂಪಾಯಿ ಹೆಚ್ಚಿಸಿ 168ರೂಪಾಯಿ ಮಾಡಿತ್ತು. ಕಳೆದ ಹನ್ನೊಂದು ವರ್ಷಗಳಲ್ಲೇ ರಾಜ್ಯದಲ್ಲಿ ಆದ ಸಂಬಳ ಹೆಚ್ಚಳಗಳಲ್ಲಿ ಅತ್ಯಂತ ಸಣ್ಣ ಪ್ರಮಾಣದ ಹೆಚ್ಚಳ ಇದೆನ್ನಲಾಗಿದೆ. 

ಆದ್ದರಿಂದ ಇದನ್ನು ಕಾರ್ಮಿಕರು ಒಟ್ಟಾಗಿ ಪ್ರತಿಭಟಿಸಿದ್ದಾರೆ. ಇದಕ್ಕಾಗಿ ಅಂಗವಾಗಿ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯಂದು ರ್ಯಾಲಿಯನ್ನೂ ಆಯೋಜಿಸಿದ್ದರು. ಒಂದು ರೂಪಾಯಿಯ ನೂರಾರು ಕವರ್‌ಗಳನ್ನು ಪ್ರಧಾನಿಮತ್ತು ಜಾರ್ಖಂಡ್ ಮುಖ್ಯಮಂತ್ರಿಗೆಕಳುಹಿಸಿಕೊಟ್ಟಿದ್ದಾರೆ. ಸರಕಾರದ ಈ ಔದಾರ್ಯವಿಲ್ಲದೆ ನಮಗೆ ಜೀವಿಸಲು ಸಾಧ್ಯವಿದೆ ಎಂದು ಉದ್ಯೋಗಖಾತರಿ ಯೋಜನೆಯ ಕಾರ್ಮಿಕರು ಹೇಳಿದ್ದಾರೆ.

ದೊಡ್ಡ ಯೋಜನೆಗಳಿಗೆ ಮತ್ತು ಉದ್ಯಮಿಗಳಿಗೆ ನೀಡಲು ಸರಕಾರದ ಬಳಿ ಹಣವಿದೆ. ಆದರೆ ಉದ್ಯೋಗ ಖಾತರಿ ಯೋಜನೆಯ ಕೆಲಸಗಾರರಿಗೆ ಸಂಬಳ ಹೆಚ್ಚಿಸಲು ಸರಕಾರದ ಬಳಿ ಹಣವಿಲ್ಲವೇ ಎಂದು ಕಾರ್ಮಿಕರು ಪ್ರಶ್ನಿಸಿದ್ದಾರೆ.ರಾಜ್ಯದಲ್ಲಿ ಬೇರೆಕೆಲಸ ಮಾಡುವವರಿಗೆ ಕನಿಷ್ಠ 224ರೂಪಾಯಿ ಸಂಬಳ ಸಿಗುತ್ತದೆ. ಉದ್ಯೋಗಖಾತರಿ ಯೋಜನೆಯ ಕಾರ್ಮಿಕರಿಗೆ ಕಳೆದ ಹತ್ತುವರ್ಷಗಳಲ್ಲಿ ಶೇ. 4.7ರಷ್ಟು ಮಾತ್ರ ಸಂಬಳ ಹೆಚ್ಚಳ ಅಗಿದೆ ಎಂದು ಅವರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News