ಅಗ್ನಿ-2 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ

Update: 2017-05-04 14:38 GMT

ಭುವನೇಶ್ವರ,ಮೇ 4: ಭಾರತವು ಗುರುವಾರ ಒಡಿಶಾ ಕರಾವಳಿಯಾಚೆ ತನ್ನ ಮಧ್ಯಮ ವ್ಯಾಪ್ತಿಯ, ಪರಮಾಣು ಸಮರ್ಥ ಪ್ರಕ್ಷೇಪಕ ಕ್ಷಿಪಣಿ ಅಗ್ನಿ-2ರ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು.

ಭಾರತೀಯ ಸೇನೆಯ ಸ್ಟ್ರಾಟಜಿಕ್ ಫೋರ್ಸ್‌ಸ್ ಕಮಾಂಡ್ ಬಾಲಾಸೋರ ಜಿಲ್ಲೆಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿಯ ಸಮಗ್ರ ಪರೀಕ್ಷಾ ವಲಯದಿಂದ ಭೂಮಿಯಿಂದ ಭೂಮಿಗೆ ಚಿಮ್ಮುವ ಈ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಿತು ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದರು.

20 ಮೀಟರ್ ಉದ್ದದ, ಘನ ಇಂಧನದ ಎರಡು ಹಂತಗಳನ್ನು ಹೊಂದಿರುವ ಅಗ್ನಿ-2 17 ಟನ್ ತೂಗುತ್ತದೆ. 2,000 ಕಿ.ಮೀ.ಗೂ ಅಧಿಕ ದೂರ ದಾಳಿ ಸಾಮರ್ಥ್ಯ ಹೊಂದಿರುವ ಅದು 1,000 ಕೆ.ಜಿ.ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News