ಇದು ಹೊಡಿಬಡಿ ಸಲ್ಮಾನ್ ರ ಈವರೆಗಿನ ಅತ್ಯುತ್ತಮ ನಟನೆಯೇ ?
ಮುಂಬೈ,ಮೇ 5 : ಬಹುನಿರೀಕ್ಷಿತ ಚಿತ್ರ ‘ಟ್ಯೂಬ್ ಲೈಟ್’ ಟೀಸರ್ ಬಿಡುಗಡೆಗೊಂಡಿದೆ. ನಿರೀಕ್ಷಿಸಿದಂತೆ ಅದು ತಂಗಾಳಿಯಂತೆ ಮನಸ್ಸಿಗೆ ಮುದ ನೀಡುತ್ತಿದೆ. ಚಿತ್ರದಲ್ಲಿ ಲಕ್ಷ್ಮಣ ಎಂಬ ಯುವಕನ ಪಾತ್ರ ನಿರ್ವಹಿಸಿದ್ದಾರೆ ಸಲ್ಮಾನ್ ಖಾನ್. ನಂಬಿಕೆ ಎನ್ನುವುದು ಟ್ಯೂಬ್ ಲೈಟ್ ನಂತೆ, ಅದು ಹೊತ್ತಿಕೊಳ್ಳಲು ಸಮಯ ತೆಗೆದುಕೊಂಡರೂ ಒಮ್ಮೆ ಹೊತ್ತಿದರೆ ಸುತ್ತಲಿನ ಪ್ರದೇಶವನ್ನು ಪ್ರಕಾಶಮಯಗೊಳಿಸುತ್ತದೆ ಎಂದು ನಂಬುವ ಯುವಕನೀತ.
1962ರ ಭಾರತ-ಚೀನಾ ಯುದ್ಧದ ಹಿನ್ನೆಲೆಯಿರುವ ಈ ಚಿತ್ರದ ಹೆಚ್ಚಿನ ಭಾಗ ಲಡಾಖ್ ಮನಾಲಿಯಲ್ಲಿ ಚಿತ್ರೀಕರಣಗಂಡಿದೆ. ಸೊಹೈಲ್ ಖಾನ್ ಅವರು ಯೋಧನ ಪಾತ್ರ ನಿರ್ವಹಿಸಿದ್ದರೆ ಚಿತ್ರದ ಹೀರೋಯಿನ್ ಚೀನೀ ನಟಿ ಝುಝು ಆಗಿದ್ದಾರೆ. ಚಿತ್ರದಲ್ಲಿ ಬಾಲ ನಟನ ಪಾತ್ರವನ್ನು ಮತಿನ್ ರೇ ತಂಗು ನಿರ್ವಹಿಸಿದ್ದಾರೆ.
ಚಿತ್ರದಲ್ಲಿ ಸಲ್ಮಾನ್ ಪಾತ್ರ ಸ್ವಾರಸ್ಯಪೂರ್ಣವಾಗಿದೆ. ಕುತ್ತಿಗೆಯಲ್ಲಿ ಶೂ ನೇತಾಡಿಸಿಕೊಂಡಿರುವ ಸಲ್ಮಾನ್ ಹಾಗೂ ಆರ್ಮಿ ಶಾರ್ಟ್ಸ್ ಧರಿಸಿದ ಅವರ ಸ್ಟ್ರಿಪ್ಪಿಂಗ್ ಆ್ಯಕ್ಟ್ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲವಾಗಲಿದೆಯೆಂದೇ ಹೇಳಬಹುದು.
ಶಾರುಖ್ ಖಾನ್ ಅತಿಥಿ ನಟರಾಗಿ ಕಾಣಿಸಿಕೊಂಡಿರುವ ಈ ಚಿತ್ರ ಈದ್ ದಿನ ಜೂನ್ 23, 2017ರಂದು ಬಿಡುಗಡೆಯಾಗಲಿದೆ. ನಾಯಕ ನಟಿ ಚೀನಾದವರಾಗಿರುವುದರಿಮದ ಚಿತ್ರ ಚೀನಾದಲ್ಲೂ ಬಿಡುಗಡೆಗೊಳ್ಳಲಿದ್ದು ಅಲ್ಲಿ ಕೂಡ ಯಶಸ್ವಿಯಾಗಬಹುದೆಂದು ನಿರೀಕ್ಷಿಸಲಾಗಿದೆ.
ಸಲ್ಮಾನ್ ಜತೆ ಬಜರಂಗಿ ಭಾಯಿಜಾನ್, ಏಕ್ ಥಾ ಟೈಗರ್ ನಂತಹ ಸೂಪರ್ ಹಿಟ್ ಚಿತ್ರ ನೀಡಿರುವ ಕಬೀರ್ ಖಾನ್ ಅವರೇ ಟ್ಯೂಬ್ ಲೈಟ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
ಟ್ಯೂಬ್ ಲೈಟ್ ಟೀಸರ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸುವ ಮುನ್ನ ಸಲ್ಮಾನ್ ಹಾಗೂ ಕಬೀರ್ ಅದನ್ನು ವಿಶೇಷ ಪ್ರದರ್ಶನವನ್ನು ತಮ್ಮ ಅಭಿಮಾನಿಗಳಿಗೆ ಉಪನಗರದ ಥಿಯೇಟರ್ ಒಂದರಲ್ಲಿ ಏರ್ಪಡಿಸಿದ್ದರು. ಸ್ಪರ್ಧೆಯೊಂದನ್ನು ಆಯೋಜಿಸಿ ಅದರ ಮುಖಾಂತರ ಆಯ್ಕೆಯಾದವರಿಗೆ ಈ ಟೀಸರ್ ಶೋದಲ್ಲಿ ಭಾಗವಹಿಸುವ ಅವಕಾಶ ಒದಗಿಸಲಾಗಿತ್ತು.