×
Ad

ರಾಜ್‌ಕುಮಾರ್ ರಾವ್ ಗೆ 324 ವರ್ಷ!

Update: 2017-05-05 17:01 IST

324 ವರ್ಷ ಪ್ರಾಯದ ವ್ಯಕ್ತಿಯೊಬ್ಬನ ಪಾತ್ರದಲ್ಲಿ ಯುವಕನೊಬ್ಬ ನಟಿಸುವ ಸವಾಲು ಸಣ್ಣದೇನೂ ಅಲ್ಲ ಮತ್ತು ಆ ಸವಾಲನ್ನು ಖ್ಯಾತ ಯುವ ನಟ, ಪ್ರತಿಭಾವಂತ ಕಲಾವಿದ ರಾಜ್‌ಕುಮಾರ್ ರಾವ್ ಸ್ವೀಕರಿಸಿದ್ದಾರೆ. ‘ರಾಬ್ತಾ’ ಚಿತ್ರದಲ್ಲಿ ಇವರು ಇಂತಹದೊಂದು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸುಶಾಂತ್ ಸಿಂಗ್ ರಜಪೂತ್ ಹಾಗು ಕೃತಿ ಸನೋನ್ ಪ್ರಮುಖ ಪಾತ್ರದಲ್ಲಿರುವ ನೂತನ ಚಿತ್ರ ರಾಬ್ತದ ಟ್ರೇಲರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದೆ. ಸುಶಾಂತ್ - ಕೃತಿ ನಡುವಿನ ಆಪ್ತ ಪ್ರೇಮ ಕತೆಯಂತೆ ಪ್ರಾರಂಭವಾಗುವ ಈ ಟ್ರೇಲರ್ ಇದೀಗ ಬೇರೆಯೇ ಕಾರಣಕ್ಕೆ ಭಾರೀ ಸುದ್ದಿಯಲ್ಲಿದೆ.

16 ಲುಕ್ ಟೆಸ್ಟ್‌ಗಳ ಬಳಿಕ ರಾವ್‌ರ ಈ ಲುಕ್‌ಅನ್ನು ಅಂತಿಮಗೊಳಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಲಾಸ್ ಏಂಜೆಲೀಸ್‌ನಿಂದ ಬಂದ ವಿಶೇಷ ತಂಡ ಪ್ರತಿದಿನ ಕನಿಷ್ಠ 5-6 ಗಂಟೆ ಮೇಕಪ್ ಮಾಡಿ ರಾವ್ ಅವರನ್ನು ಈ ಪಾತ್ರಕ್ಕೆ ಸಿದ್ಧಪಡಿಸುತ್ತಿತ್ತು ಎಂದು ಹೇಳಲಾಗಿದೆ. ಇದಕ್ಕಾಗಿ ರಾಜ್ ಕುಮಾರ್ ವಿಶೇಷ ತಯಾರಿ ಹಾಗು ತಾಳ್ಮೆ ಪ್ರದರ್ಶಿಸಿ ನಿರ್ಮಾಪಕರು ಹಾಗು ನಿರ್ದೇಶಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಭಾರೀ ಮೇಕಪ್‌ಅನ್ನು ಹಾಗೂ ಅದರಿಂದ ಆಗುವ ದೈಹಿಕ ಆಯಾಸವನ್ನು ಸಹಿಸುವುದು ಮಾತ್ರವಲ್ಲದೆ ರಾಜ್ ಕುಮಾರ್ ಈ ಪಾತ್ರಕ್ಕಾಗಿ ತಮ್ಮ ದೇಹ ಭಾಷೆ ಹಾಗು ಧ್ವನಿಯಲ್ಲೂ ಸಾಕಷ್ಟು ಮಾರ್ಪಾಡು ಮಾಡಲು ಯಶಸ್ವಿಾಗಿ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

ಚಿತ್ರ ಬಿಡುಗಡೆಯಾದ ಮೇಲೆ ವೀಕ್ಷಕರೂ ಇದಕ್ಕೆ ಮೆಚ್ಚುಗೆಯ ಮೊಹರೊತ್ತಿದರೆ ರಾಜ್ ಕುಮಾರ್ ಅವರ ಪಾತ್ರ ಬಾಲಿವುಡ್‌ನ ಇತಿಹಾಸದಲ್ಲಿ ವಿಶೇಷ ಪಾತ್ರವೊಂದಾಗಿ ದಾಖಲಾಗುವುದು ಖಚಿತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News