×
Ad

ಸುನೀಲ್ ಶೆಟ್ಟಿ ಮರು ಪ್ರವೇಶ

Update: 2017-05-05 17:06 IST

ಅಕ್ಷಯ್ ಕುಮಾರ್‌ರ ಸಮಕಾಲೀನ ಯುವ ನಟ ಸುನೀಲ್ ಶೆಟ್ಟಿ ಬಾಲಿವುಡ್‌ನಿಂದ ಬದಿಗೆ ಸರಿದರೇ ಎನ್ನುವಾಗಲೇ ಮತ್ತೆ ಅವರು ಹೊಸ ಅಧ್ಯಾಯವೊಂದನ್ನು ತೆರೆಯಲು ಹೊರಟಿದ್ದಾರೆ. ಈ ಬಾರಿ ಬೆಳ್ಳಿತೆರೆಯ ಮೇಲಲ್ಲ, ಕಿರುತೆರೆಯ ಮೂಲಕ ಅವರು ಭವಿಷ್ಯವನ್ನು ಹುಡುಕುತ್ತಿದ್ದಾರೆ. ವಿಶೇಷವೆಂದರೆ ಸುನೀಲ್ ಶೆಟ್ಟಿ ಈ ಸರಣಿಗಾಗಿ ಮತೆ್ತ ಯುವಕನಾಗಿ ಕಂಗೊಳಿಸುತ್ತಿದ್ದಾರೆ.

‘ಇಂಡಿಯಾಸ್ ಅಸ್ಲಿ ಚಾಂಪಿಯನ್ಸ್’ ಕಾರ್ಯಕ್ರಮದ ಮೂಲಕ ಮೊದಲಾಗಿ ಕಾಣಿಸಿಕೊಳ್ಳಲಿರುವ ನಟ ಇದಕ್ಕಾಗಿ ನಡೆದ ಫೋಟೊಶೂಟ್‌ನಲ್ಲಿ ತಮ್ಮ 55ರ ವಯಸ್ಸಿನಲ್ಲೂ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಸುನೀಲ್ ದೈಹಿಕ ಕ್ಷಮತೆಯನ್ನು ನೋಡಿದರೆ ಯುವಕರೂ ನಾಚಬೇಕು ಎನ್ನುತ್ತಾರೆ ವಿಮರ್ಶಕರು.

ಮೂರು ವರ್ಷಗಳ ಬ್ರೇಕ್ ಪಡೆದುಕೊಂಡಿದ್ದರಿಂದ ಆದ ಪ್ರಯೋಜನಗಳನ್ನು ಸುನೀಲ್ ಪತ್ರಿಕೆಯೊಂದರ ಜತೆ ಹಂಚಿಕೊಂಡಿದ್ದು, ಇದೀಗ ಅವರು ಫಿಟ್ನೆಸ್ ವಿಚಾರದಲ್ಲಿ ತಮಗಿರುವ ಜ್ಞಾನವನ್ನು ತಮ್ಮ ಅಭಿಮಾನಿಗಳಲ್ಲಿ ಹಂಚಲು ಕಾತುರರಾಗಿದ್ದಾರೆ. ನಾನು ಟಿವಿ ಕಾರ್ಯಕ್ರಮದ ಮೂಲಕ ಈ ಕಾರ್ಯ ಮಾಡಬಲ್ಲೆನೆಂಬ ಆತ್ಮವಿಶ್ವಾಸ ಅವರಿಗಿದೆ.

‘ಇಂಡಿಯಾಸ್ ಅಸ್ಲಿ ಚಾಂಪಿಯನ್ಸ್’ ಕಾರ್ಯಕ್ರಮದಲ್ಲಿ ಸ್ಪರ್ಧಾಳುಗಳ ದೈಹಿಕ ಹಾಗೂ ಮಾನಸಿಕ ಕಾರ್ಯಕ್ಷಮತೆಯನ್ನು ಸುನೀಲ್ ಒರೆಗೆ ಹಚ್ಚಲಿದ್ದಾರೆ. ಅವರ ಜತೆ ಅಮಿತಾಭ್ ಬಚ್ಚನ್ ಅವರ ಫಿಟ್ನೆಸ್ ಟ್ರೈನರ್ ವೃಂದಾ ಮೆಹ್ತಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಪ್ರತಿಯೊಬ್ಬ ಸ್ಪರ್ಧಾಳು ಜತೆ ವೈಯಕ್ತಿಕವಾಗಿ ಆಕೆ ಕಾರ್ಯನಿರ್ವಹಿಸಿ ಅವರ ಫಿಟ್ನೆಸ್ ಹೆಚ್ಚಿಸಲು ಶ್ರಮ ವಹಿಸಲಿದ್ದಾರೆ. ಯುವ ತಲೆಮಾರು ಸದಾ ಫಿಟ್ನೆಸ್‌ಗಾಗಿ ತಲೆಕೆಡಿಸಿಕೊಳ್ಳುತ್ತಿರುವುದರಿಂದ ಶೆಟ್ಟಿಯ ಪ್ರವೇಶ ಅವರ ಬದುಕಿನಲ್ಲಿ ಮಾರ್ಪಾಡು ಮಾಡುವುದರಲ್ಲಿ ಸಂಶಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News