ಭ್ರಷ್ಟಾಚಾರಿ ಅಧಿಕಾರಿಯ ರಕ್ಷಣೆಗೆ 21 ಲಕ್ಷ ಖರ್ಚು ಮಾಡಿದ ಅಖಿಲೇಶ್ ಯಾದವ್
ಲಕ್ನೊ,ಮೆ 6: ನೋಯ್ಡಾದ ಮುಖ್ಯ ಇಂಜಿನಿಯರ್ ಯಾದವ್ ಸಿಂಗ್‌ರನ್ನು ಸಿಬಿಐ ತನಿಖೆಯಿಂದ ರಕ್ಷಿಸಲು ಅಖಿಲೇಶ್ ಯಾದವ್ ಸರಕಾರ 21ಲಕ್ಷರೂಪಾಯಿ ಖರ್ಚುಮಾಡಿದೆ. ಯಾದವ್ ಸಿಂಗ್ ಕಪ್ಪುಹಣಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂಕೋರ್ಟಿನಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಕೋರ್ಟಿನಲ್ಲಿ ಹಾಜರಾದ ವಕೀಲರಿಗೆ ಸರಕಾರಿಖಜಾನೆಯಿಂದ ಅಖಿಲೇಶ್ ಫೀಸು ಭರಿಸಿದ್ದಾರೆ. ಪ್ರಕರಣದಲ್ಲಿ ಹಾಜರಾದ ಕಪಿಲ್ ಸಿಬಲ್‌ರಿಗೆ 8.80ಲಕ್ಷರೂಪಾಯಿ. ಹರೀಶ್ ಸಾಳ್ವೆಯವರಿಗೆ 5 ಲಕ್ಷರೂಪಾಯಿ,ರಾಕೇಶ್ ದ್ವಿವೇದಿಗೆ 4.05ಲಕ್ಷರೂಪಾಯಿ, ದಿನೇಶ್ ದ್ವಿವೇದಿಗೆ 3.30ಲಕ್ಷರೂಪಾಯಿ ಹೀಗೆ ಒಟ್ಟು 21.25 ಲಕ್ಷರೂಪಾಯಿ ಅಖಿಲೇಶ್ ರಾಜ್ಯದ ಖಜಾನೆಯಿಂದ ವಿನಿಯೋಗಿಸಿದ್ದಾರೆ. ಮಾಹಿತಿ ಹಕ್ಕು ಅರ್ಜಿಸಲ್ಲಿಸಿ ಸಾಮಾಜಿಕ ಕಾರ್ಯಕರ್ತ ನೂತನ್ ಠಾಕೂರ್ ಈ ವಿವರವನ್ನು ಪಡೆದುಕೊಂಡಿದ್ದಾರೆ.
ಅಧಿಕಾರದುರಪಯೋಗಿಸಿ ಸಾರ್ವಜನಿಕ ಖಜಾನೆಗೆ ನಷ್ಟ ಮಾಡಿದ ಆರೋಪದಲ್ಲಿ ಕಳೆದವರ್ಷ ಸಿಬಿಐ ಯಾದವ್ ಸಿಂಗ್‌ರನ್ನು ಬಂಧಿಸಿತ್ತು. 19.92 ಕೋಟಿ ರೂಪಾಯಿ ಕಪ್ಪುಹಣ ಬಿಳಿಮಾಡಿಸಿದ್ದಾರೆ ಎನ್ನುವ ಆರೋಪವನ್ನು ಕೂಡಾ ಯಾದವ್ ಸಿಂಗ್ ಎದುರಿಸುತ್ತಿದ್ದಾರೆ.