ಸುಕ್ಮಾ ದಾಳಿಯಲ್ಲಿ ಭಾಗಿಯಾಗಿದ್ದ 9 ಮಾವೋವಾದಿಗಳ ಬಂಧನ

Update: 2017-05-07 03:30 GMT
ಸುಕ್ಮಾ ದಾಳಿಯಲ್ಲಿ ಗಾಯಗೊಂಡಿದ್ದ ಸಿಆರ್ ಪಿಎಫ್ ಸಿಬ್ಬಂದಿ

ರಾಯ್ಪುರ, ಮೇ 7: ಸಿಆರ್ ಪಿಎಫ್ ಸಿಬ್ಬಂದಿಯ ಮೇಲೆ ನಡೆದ ಭೀಕರ ದಾಳಿಗೆ ಸಂಬಂಧಿಸಿದಂತೆ 9 ಮಾವೋವಾದಿಗಳನ್ನು ಛತ್ತೀಸ್ ಗಡದ ವಿವಿಧ ಭಾಗಗಳಿಂದ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರು ಮಂದಿಯನ್ನು ಚಿಂತಾಗುಫಾ ಪೊಲೀಸ್ ಠಾಣೆಯ ವ್ಯಾಪ್ತಿ ಹಾಗೂ 3 ಮಂದಿಯನ್ನು ಚಿಂತಲ್ ನರ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ ಎಂದು ಸುಕ್ಮಾ ಅಡಿಷನಲ್ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಜಿತೇಂದ್ರ ಶುಕ್ಲಾ ಮಾಹಿತಿ ನೀಡಿದ್ದಾರೆ.

“ವಿಚಾರಣೆಯ ವೇಳೆ 9 ಮಂದಿ ದಾಳಿಯಲ್ಲಿ ತಮ್ಮ ಪಾತ್ರವಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ” ಎಂದು ಅವರು ಹೇಳಿದ್ದಾರೆ.

ಬಂಧಿತರನ್ನು ಸೋಧಿ ಲಿಂಗಾ, ಸೋಧಿ ಮುದಾ, ಪೊಡಿಯಾಮ್ ಜೋಗ, ಮಡ್ಕಮ್ ಭೀಮಾ, ರಾವ ಆಯ್ತ, ಮಡ್ಕಮ್ ಸೋಂದು, ವೆಟ್ಟಿ ಮಲ್ಲ, ಮುಚಾಕಿ ನಂದ ಹಾಗೂ ಮಾಡ್ವಿ ಕೋಸ ಎಂದು ಗುರುತಿಸಲಾಗಿದೆ. ಇವರೆಲ್ಲರೂ ದಂಡಕಾರಣ್ಯ ಆದಿವಾಸಿ ಕಿಸಾನ್ ಮಝ್ದೂರ್ ಸಂಘಟನೆಯ ಸದಸ್ಯರಾಗಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News