ಕೇಜ್ರಿವಾಲ್‌ಗೆ ನನ್ನ ಕಣ್ಣೆದುರೇ ಸತ್ಯೇಂದ್ರ ಜೈನ್ 2ಕೋಟಿ ರೂ. ಕೊಟ್ಟರು: ಕಪಿಲ್ ಮಿಶ್ರಾ
ಹೊಸದಿಲ್ಲಿ, ಮೇ 7: ದಿಲ್ಲಿ ಮುಖ್ಯ ಮಂತ್ರಿ ಮತ್ತು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗೆ ಸತ್ಯೇಂದ್ರ ಜೈನ್ ಅವರು 2ಕೋಟಿ ರೂ. ಕೊಟ್ಟಿದ್ದಾರೆ. ನಾನು ಅದನ್ನು ಕಣ್ಣಾರೆ ನೋಡಿದ್ದೇನೆ ” ಎಂದು ದಿಲ್ಲಿಯ ಮಾಜಿ ಜಲ ಮತ್ತು ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ ಹೊಸ ಬಾಂಬ್ ಸೃಷ್ಟಿಸುವ ಮೂಲಕ ಆಪ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಣದ ಬಗ್ಗೆ ಕೇಜ್ರಿವಾಲ್ ಯಾವುದೇ ಮಾಹಿತಿ ನೀಡಿಲ್ಲ. ಮುಖ್ಯಮಂತ್ರಿ ಕೇಜ್ರಿವಾಲ್ ಜೊತೆ ಸತ್ಯಂದ್ರ ಜೈನ್ 50 ಕೋಟಿ. ರೂ.ಗಳ ಲ್ಯಾಂಡ್ ಡೀಲ್ ಮಾಡಿದ್ದರು.ನಾನು ಇದನ್ನು ಸಿಬಿಐ ಅಥವಾ ಯಾವುದೇ ತನಿಖಾ ಸಂಸ್ಥೆಯ ಮುಂದೆ ಸಾಕ್ಷ್ಯ ನುಡಿಯುತ್ತೇನೆ ಎಂದು ಹೇಳಿದರು.
ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ವಿವರ ನೀಡಿದ್ದೇನೆ. ಈ ಬಗ್ಗೆ ಮಾಹಿತಿ ನೀಡಿರುವೆನು ಎಂದು ಸತ್ಯೇಂದ್ರ ಜೈನ್ ನುಡಿದರು. ಪಕ್ಷದಲ್ಲಿ ಒಂದಿಷ್ಟು ಗೊಂದಲವಿದೆ , ಕಸವಿದೆ. ಕೊಳೆ ಇದೆ. ಇದನ್ನು ಸ್ವಚ್ಛಗೊಳಿಸುವ ಕಾರ್ಯ ರಾಜಘಾಟ್‌ನಿಂದ ಆರಂಭಗೊಳ್ಳಲಿದೆ. ಆಮ್ ಆದ್ಮಿ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದೇನೆ. ನನ್ನನ್ನು ಪಕ್ಷದಿಂದ ಹೊರ ಹಾಕಲು ಸಾಧ್ಯವಿಲ್ಲ. ನಾನು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.