×
Ad

ಕಾನ್ಪುರದಿಂದ ಕಾಶ್ಮೀರಕ್ಕೆ ತೆರಳಿದ ‘ಕಲ್ಲು ತೂರಾಟ’ ದಳ

Update: 2017-05-07 16:34 IST

ಕಾನ್ಪುರ,ಮೇ 7: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಗೆ ಬೆಂಬಲವಾಗಿ ಇಲ್ಲಿಯ ಧಾರ್ಮಿಕ ಸಂಘಟನೆ ಜನಸೇನಾದ ವತಿಯಿಂದ ಸಾಧುಗಳು ಮತ್ತು ಹಿಂದು ಅರ್ಚಕರ ತಂಡವೊಂದು ಅಲ್ಲಿ ಕಲ್ಲುತೂರಾಟ ನಡೆಸುವ ಯುವಜನರಿಗೆ ಉತ್ತರಿಸಲು ರವಿವಾರ ಕಣಿವೆಗೆ ಪ್ರಯಾಣ ಬೆಳೆಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಸೇರಿದಂತೆ ನೂರಾರು ಶ್ರೀಸಾಮಾನ್ಯರು, ಸಾಧುಗಳು, ಶಂಕರಾಚಾರ್ಯ ಮುನಿಸಾಜಿ ಮಹಾರಾಜ್ ಮತ್ತು ಜನಸೇನಾದ ದಳದ ಅಧ್ಯಕ್ಷ ಅರುಣ್ ಪರಮ್‌ಜಿ ಮಹಾರಾಜ್ ಮತ್ತಿತರರನ್ನು ಈ ದಳವು ಒಳಗೊಂಡಿದೆ.

ತಾನು ಕಳೆದ ಕೆಲವು ತಿಂಗಳುಗಳಿಂದ ಕಾನ್ಪುರದ ಸ್ವಯಂಸೇವಕರಿಗೆೆ ಕಲ್ಲು ತೂರಾಟದದ ತರಬೇತಿಯನ್ನು ನೀಡುತ್ತಿದ್ದೇನೆ ಎಂದು ತಿಳಿಸಿದ ಸಾಧು ಬಾಲಯೋಗಿ ಅರುಣ ಪುರಿ ಚೈತನ್ಯ ಅವರು, ಮೇ 10ರಂದು ಶ್ರೀನಗರದ ಲಾಲ್ ಚೌಕ್‌ನಲ್ಲಿ ಯಜ್ಞವೊಂದನ್ನು ನಡೆಸುವುದಾಗಿಯೂ ಹೇಳಿದರು.

 ದಳವು ಪೂಂಛ್ ಮತ್ತು ಕೆಲವು ದಿನಗಳ ಹಿಂದೆ ಪಾಕಿಸ್ತಾನಿ ಸೇನೆಯು ಇಬ್ಬರು ಭಾರತೀಯ ಯೋಧರ ಶಿರಚ್ಛೇದ ನಡೆಸಿದ ಕೃಷ್ಣಾ ಘಾಟಿಗೂ ಭೇಟಿ ನೀಡಲಿದೆ ಎಂದರು.

ಕಳೆದ ಕೆಲವು ದಿನಗಳಿಂದ ಕಣಿವೆಯಲ್ಲಿ ಭಾರತೀಯ ಸೇನೆಯ ಮೇಲೆ ದಾಳಿ ನಡೆಸುತ್ತಿರುವ ಕಲ್ಲುತೂರಾಟಗಾರರೊಂದಿಗೆ ದಳವು ಹೋರಾಡಲಿದ್ದು,ಈ ಅಭಿಯಾನದಲ್ಲಿ ಸೇರಲು ದೇಶದ ಇತರ ಭಾಗಗಳಿಂದಲೂ ಜನರು ಸಿದ್ಧರಾಗಿದ್ದಾರೆ ಎಂದು ದಳದ ಇನ್ನೋರ್ವ ನಾಯಕರು ತಿಳಿಸಿದರು.

ಆದರೆ ತನ್ನ ಕಾಶ್ಮೀರ ಭೇಟಿಗೆ ಈ ಕಲ್ಲುತೂರಾಟ ದಳವು ಅನುಮತಿ ಪಡೆದುಕೊಂಡಿಲ್ಲ, ಹೀಗಾಗಿ ಈ ಅಭಿಯಾನಕ್ಕೆ ತೊಂದರೆ ಎದುರಾಗುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News