ನಟಿ ಖುಶ್ಬೂ ಮನೆಗೆ ಬಾಂಬ್ ಬೆದರಿಕೆ
Update: 2017-05-07 16:36 IST
ಚೆನ್ನೈ, ಮೇ 7: ನಟಿ ಹಾಗೂ ಕಾಂಗ್ರೆಸ್ ವಕ್ತಾರೆ ಖುಶ್ಬೂ ಅವರ ಚೆನ್ನೈ ಪಟ್ಟಿಣಪ್ಪಾಕ್ಕತ್ತೆ ಮನೆಗೆ ಬಾಂಬ್ ಇರಿಸಲಾಗಿದೆ ಎಂದು ಸುಳ್ಳುಸಂದೇಶ ರವಾನಿಸಿದ ಉದುಮಲ್ ಪೇಟ್ ಎಂಬಲ್ಲಿನ ಮಾರಿಅಮ್ಮಾಳ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಖುಶ್ಬೂ, ಅವರ ಪತಿ ಸುಂದರ್ ಮತ್ತು ಮಕ್ಕಳು ವಿದೇಶದಲ್ಲಿ ರಜಾಪ್ರವಾಸದಲ್ಲಿದ್ದಾರೆ.
ಶನಿವಾರ ಬೆಳಗ್ಗೆ 3:50ಕ್ಕೆ ಪೊಲೀಸ್ ಕಂಟ್ರೋಲ್‌ರೂಮ್‌ಗೆ ಬಾಂಬ್ ಬೆದರಿಕೆ ಸಂದೇಶ ಲಭಿಸಿತ್ತು. ಮನೆಯಲ್ಲಿದ್ದ ಭದ್ರತಾ ನೌಕರರ ಸಹಾಯದಿಂದ ಮನೆಯನ್ನು ತೆರೆದು ಪರಿಶೀಲಿಸಿದರೆ. ಅಲ್ಲಿ ಏನೂ ಸಿಗಲಿಲ್ಲ.