×
Ad

ಜುಲೈನಲ್ಲಿ ಇರೋಮ್‌ ಶರ್ಮಿಳಾ ವಿವಾಹ

Update: 2017-05-08 17:01 IST

ಇಂಫಾಲ್ , ಮೇ 8:  ಮಣಿಪುರದ  ಉಕ್ಕಿನ ಮಹಿಳೆ ಖ್ಯಾತಿಯ ಮಣಿಪುರದ ಹೋರಾಟಗಾರ್ತಿ ಇರೋಮ್‌ ಶರ್ಮಿಳಾ ಚಾನು  ಅವರು ತಮ್ಮ ಬಹುಕಾಲದ ಗೆಳೆಯ ಡೆಸ್ಮಂಡ್ ಕೌಟಿನ್ಹೊ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಿ ನಡೆಸಿದ್ದಾರೆ.
ಇರೋಮ್‌ ಶರ್ಮಿಳಾ ಚಾನು  ಮತ್ತು ಡೆಸ್ಮಂಡ್ ಕೌಟಿನ್ಹೊ ವಿವಾಹ  ಜುಲೈ ಕೊನೆಯ ವಾರದಲ್ಲಿ ತಮಿಳುನಾಡಿನಲ್ಲಿ ನಡೆಯುವ ಸಾಧ್ಯತೆ ಇದೆ.ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು  ಐರೋಮ್‌ ಶರ್ಮಿಳಾ ಮಾಹಿತಿ ನೀಡಿದ್ದಾರೆ.

ಇರೋಮ್‌ ಶರ್ಮಿಳಾ ಚಾನು ಇತ್ತೀಚೆಗೆ ಮುಕ್ತಾಯಗೊಂಡ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ತೌಬಾಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. 
ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ 16 ವರ್ಷಗಳಿಂದ ಉಪವಾಸ ಸತ್ಯಾಗ್ರಹ ನಡೆಸಿದ್ದ ಶರ್ಮಿಳಾ ಕಳೆದ ಆಗಸ್ಟ್‌ 9ರಂದು ಪ್ರತಿಭಟನೆಯನ್ನು ಕೈಬಿಟ್ಟಿದ್ದರು. ಅನಂತರ ಪಿಆರ್‌ಜೆಎ ಪಕ್ಷ ಸ್ಥಾಪಿಸಿ, ತೌಬಾಲ್‌ ಕ್ಷೇತ್ರದಿಂದ  ಕಾಂಗ್ರೆಸ್ ನ ಒಕ್ರಮ್‌ ಇಬೊಬಿ ಸಿಂಗ್‌ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News