ಜುಲೈ 1ರಿಂದ ಜಿಎಸ್‌ಟಿ ಜಾರಿ : ಜೇಟ್ಲಿ

Update: 2017-05-08 13:34 GMT

ಟೋಕಿಯೊ (ಜಪಾನ್), ಮೇ 8: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಜುಲೈ ಒಂದರಿಂದ ಅನುಷ್ಠಾನಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಸೋಮವಾರ ಹೇಳಿದರು.

ಇಲ್ಲಿ ಸಿಐಐ-ಕೋಟಕ್ ಹೂಡಿಕೆದಾರರ ದುಂಡು ಮೇಜಿನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕೆಲವು ಸೇವೆಗಳ ವೆಚ್ಚವು ಕೊಂಚ ಏರಿಕೆಯಾಗಬಹುದಾದರೂ, ವಸ್ತುಗಳ ಬೆಲೆಯಲ್ಲಿ ಯಾವುದೇ ಏರಿಕೆಯಾಗುವುದಿಲ್ಲ ಎಂದು ಅವರು ಹೇಳಿದರು.

ಭಾರತಕ್ಕೆ ಸ್ವಾತಂತ್ರ ಲಭಿಸಿದ ಬಳಿಕ ನಡೆದ ಅತ್ಯಂತ ದೊಡ್ಡ ತೆರಿಗೆ ಸುಧಾರಣೆ ಎಂಬುದಾಗಿ ಬಣ್ಣಿಸಲ್ಪಟ್ಟಿರುವ ಜಿಎಸ್‌ಟಿ, ಹಲವಾರು ಕೇಂದ್ರೀಯ ಮತ್ತು ರಾಜ್ಯ ತೆರಿಗೆಗಳ ಸ್ಥಾನದಲ್ಲಿ ‘ರಾಷ್ಟ್ರೀಯ ಮಾರಾಟ ತೆರಿಗೆ’ ಪರಿಚಯಿಸಲಿದೆ. ಈ ಮೂಲಕ ದೇಶದಲ್ಲಿ ಏಕ ಮಾರುಕಟ್ಟೆ ಸೃಷ್ಟಿಯಾಗಲಿದ್ದು, ದೇಶದಲ್ಲಿ ವ್ಯಾಪಾರ ಮಾಡುವುದು ಸುಲಭವಾಗಲಿದೆ.

ತನ್ನ ನೇತೃತ್ವ ಹಾಗೂ ಎಲ್ಲ ರಾಜ್ಯಗಳ ಪ್ರತಿನಿಧಿಗಳನ್ನು ಹೊಂದಿರುವ ಜಿಎಸ್‌ಟಿ ಮಂಡಳಿಯು, ವಿವಿಧ ವಸ್ತುಗಳು ಮತ್ತು ಸೇವೆಗಳ ತೆರಿಗೆ ದರಗಳನ್ನು ಕೆಲವೇ ದಿನಗಳಲ್ಲಿ ಅಂತಿಮಗೊಳಿಸಲಿದೆ ಹಾಗೂ ಸರಳೀಕೃತ ಪರೋಕ್ಷ ತೆರಿಗೆ ವ್ಯವಸ್ಥೆಯು ಜುಲೈ ಒಂದರಿಂದ ಜಾರಿಗೆ ಬರಲು ಸಿದ್ಧತೆಗಳು ನಿಗದಿಯಂತೆ ನಡೆಯುತ್ತಿವೆ ಎಂದು ಹಣಕಾಸು ಸಚಿವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News