ಮುಸ್ಲಿಂ ಮದುವೆಯೊಂದು ಒಪ್ಪಂದ, ಗಂಡನೊಬ್ಬನೇ ಅದನ್ನು ಅಂತ್ಯಗೊಳಿಸುವಂತಿಲ್ಲ : ಅಲಹಾಬಾದ್ ಹೈಕೋರ್ಟ್

Update: 2017-05-09 09:25 GMT

ಅಲಹಾಬಾದ್,ಮೇ 9: ಮುಸ್ಲಿಂ ಮದುವೆಗಳು ಒಪ್ಪಂದಗಳಾಗಿದ್ದು, ಪತಿಯೊಬ್ಬನೇ ಈ ಒಪ್ಪಂದವನ್ನು ಅಂತ್ಯಗೊಳಿಸುವಂತಿಲ್ಲ. ಹೀಗಾಗಿ ತ್ರಿವಳಿ ತಲಾಖ್‌ನ ಇಸ್ಲಾಮಿಕ್ ಪದ್ಧತಿಯು ಕಾನೂನಿನ ದೃಷ್ಟಿಯಲ್ಲಿ ಸಮರ್ಥನೀಯವಲ್ಲ ಮತ್ತು ಅದು ಕೆಟ್ಟದ್ದಾಗಿದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಹೇಳಿದೆ.

 ತನ್ನ ವಿರುದ್ಧ ಪತ್ನಿಯು ದಾಖಲಿಸಿರುವ ಕ್ರಿಮಿನಲ್ ಮೊಕದ್ದಮೆಯನ್ನು ವಜಾಗೊಳಿಸುವಂತೆ ಕೋರಿ ಮುಸ್ಲಿಂ ವ್ಯಕ್ತಿಯೋರ್ವ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ತನ್ನ ಪತಿಯು ವರದಕ್ಷಿಣೆಗಾಗಿ ತನ್ನನ್ನು ಹಿಂಸಿಸಿದ್ದ ಮತ್ತು ತಾನು ನಿರಾಕರಿಸಿದಾಗ ತನಗೆ ವಿಚ್ಛೇದನ ನೀಡಿದ್ದಾನೆ ಎಂದು ವ್ಯಕ್ತಿಯ ಪತ್ನಿ ದೂರಿನಲ್ಲಿ ಆರೋಪಿಸಿದ್ದಳು.

ಪ್ರಕರಣದ ವಿಚಾರಣೆಯು ಎ.19ರಂದು ಅಂತ್ಯಗೊಂಡಿದ್ದು, ತೀರ್ಪಿನ ವಿವಿರಗಳನ್ನು ಮಂಗಳವಾರ ಬಹಿರಂಗಗೊಳಿಸಲಾಗಿದೆ. ತನ್ನ ವಿರುದ್ಧದ ಕ್ರಿಮಿನಲ್ ಆರೋಪಗಳನ್ನು ರದ್ದುಗೊಳಿಸುವಂತೆ ಕೋರಿದ್ದ ವ್ಯಕ್ತಿಯ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News