ಭಾಷಣ ಮಾಡುತ್ತಿದ್ದ ಸಿಇಒ ಮೇಲೆ ಹೀಗೊಂದು ದಾಳಿ !

Update: 2017-05-09 12:38 GMT

ನವದೆಹಲಿ, ಮೇ.9 : ಆಸ್ಟ್ರೇಲಿಯಾದ ಪರ್ತ್ ನಗರದಲ್ಲಿ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಖ್ವಾಂಟಾಸ್ ಏರ್ ವೇಸ್ ಸಿಇಒ ಅಲನ್ ಜೊಯ್ಸಾ ಅವರ ಮೇಲೆ ಆಶ್ಚರ್ಯಕರ ದಾಳಿಯೊಂದು ನಡೆದಿದೆ. ವ್ಯಕ್ತಿಯೊಬ್ಬ ಎಲ್ಲರೂ ನೋಡನೋಡುತ್ತಿದ್ದಂತೆಯೇ ಅವರ ಮುಖಕ್ಕೆ ಕ್ರೀಮ್ ಪೈ ಒಂದನ್ನು ಸವರಿದ್ದೇ ಸವರಿದ್ದು. ಆಸ್ಟ್ರೇಲಿಯಾದ ವಿಮಾನಯಾನ ಸಂಸ್ಥೆಯ ಮುಖ್ಯಸ್ಥರಾಗಿರುವ ಜೋಯ್ಸೆ ಅವರು ಬಿಸಿನೆಸ್ ಬ್ರೇಕ್ ಫಾಸ್ಟ್ ಒಂದರಲ್ಲಿ ಭಾಗವಹಿಸಿದಾಗ ಘಟನೆ ನಡೆದಿದೆ. ಅಲನ್ ಅವರು ಸಭೆಯಲ್ಲಿ ಮಾತನಾಡುತ್ತಿದ್ದಂತೆಯೇ ಸೂಟು ಬೂಟು ಧರಿಸಿದ ಹಿರಿಯ ವ್ಯಕ್ತಿಯೊಬ್ಬ ವೇದಿಕೆಯನ್ನೇರಿ ತನ್ನ ಕೈಯಲ್ಲಿದ್ದ ಕ್ರೀಮ್ ಪೈ ಯನ್ನು ಅವರ ಮುಖಕ್ಕೆ ಸವರಿ ಶಾಂತವಾಗಿ ವೇದಿಕೆಯಿಂದಿಳಿದು ಹೋಗಿದ್ದಾನೆ.

ಅನಿರೀಕ್ಷಿತ ಬೆಳವಣಿಗೆಯಿಂದ ಅರೆಕ್ಷಣ ಅವಾಕ್ಕಾದವರಂತೆ ಅಲನ್ ಕಂಡು ಬಂದರೂ ಸಾವರಿಸಿಕೊಂಡ ಅವರು ತನ್ನನ್ನೇಕೆ ಗುರಿಯಾಗಿಸಿದರೆಂದು ತನಗೆ ತಿಳಿಯದು ಎಂದು ಹೇಳಿ ತಮ್ಮ ಮುಖ ಸ್ವಚ್ಛಗೊಳಿಸಿಕೊಳ್ಳಲು ವೇದಿಕೆಯಿಂದ ಹೊರನಡೆದರು. ನಂತರ ತಮ್ಮ ಬ್ಲೇಝರ್ ಇಲ್ಲದೆ ಹಿಂದಿರುಗಿ ಬಂದು ಭಾಷಣ ಮಾಡಿದ ಅವರು ‘‘ಇನ್ನು ಹೆಚ್ಚಿನ ಪೈ ಇದ್ದರೆ ಅದನ್ನು ಮುಗಿಸುತ್ತೀರಾ ?’’ ಎಂದು ಕೇಳಿ ಬಿಟ್ಟರು.

ನಂತರ ಸುದ್ದಿಗಾರರೊಂದಿಗೆ ಹಾಸ್ಯ ಚಟಾಕಿ ಹಾರಿಸಿದ ಅವರು ತನ್ನ ಮುಖಕ್ಕೆ ಸವರಿದ ಪೈ ಯಾವ ಫ್ಲೇವರ್ ನದ್ದು ಎಂದು ತಿಳಿಯಲು ತನಗೆ ಸಾಧ್ಯವಾಗಲಿಲ್ಲ ಎಂದು ಹೇಳಿದರು. ‘‘ನಾನು ಪೈ ತಿನ್ನುವವನಲ್ಲ ಹೆಚ್ಚಿನದ್ದು ನನ್ನ ಕನ್ನಡಕದ ಮೇಲೆ ಬಿದ್ದಿತ್ತು,’’ ಎಂದೂ ಅವರು ತಿಳಿಸಿದರು.

ಅಲನ್ ಅವರ ಮುಖಕ್ಕೆ ಆ ವ್ಯಕ್ತಿ ಕ್ರೀಮ್ ಪೈ ಏಕೆ ಸವರಿದನೆಂದು ತಿಳಿದು ಬಂದಿಲ್ಲವಾಗಿದ್ದು ಆತನನ್ನು ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News