ಕಪ್ಪು ಹುಡುಗಿಯನ್ನು ಮದುವೆಯಾದ ಆ ‘ದೊಡ್ಡ ಮನಸ್ಸಿನ ಗಂಡ ’ನನ್ನನ್ನು ಒಂದು ದಿನವೂ ಬಿಡದೆ ಬಡಿಯುತ್ತಿದ್ದ: ಮುನವ್ವರ್

Update: 2017-05-10 10:34 GMT

ನಾನು ಈ ಭೂಮಿಯಲ್ಲಿ ಜನ್ಮ ತಳೆದ ದಿನ ನನ್ನ ಕುಟುಂಬವು ಊಟವನ್ನೇ ಮಾಡಿರಲಿಲ್ಲ. ಏಕೆಂದರೆ ನಾನು ಹೆತ್ತವರಿಗೆ ನಾಲ್ಕನೇ ಪುತ್ರಿಯಾಗಿದ್ದೆ. ನನ್ನ ಕಪ್ಪುಬಣ್ಣ ಅವರನ್ನು ಇನ್ನಷ್ಟು ಸಂಕಷ್ಟದ ಸ್ಥಿತಿಗೆ ತಳ್ಳಿತ್ತು. ನನ್ನ ಮೂವರು ಸೋದರಿಯರು ಗೌರವರ್ಣ ಹೊಂದಿದ್ದು, ಒಳ್ಳೆಯ ಎತ್ತರ ಮತ್ತು ತೆಳುವಾದ ದೇಹ ಹೊಂದಿದ್ದರು. ನಾನು ಸ್ಪಷ್ಟವಾಗಿ ನನ್ನನ್ನು ಹೆತ್ತವರ ಪಾಲಿಗೆ ಹೊರೆಯಾಗಿದ್ದೆ ಮತ್ತು ಬಾಲ್ಯದಿಂದಲೇ ಬೇರೆಯವರ ಬಾಯಿಯಿಂದ ಈ ಮಾತನ್ನು ಕೇಳುತ್ತಲೇ ನಾನು ಬೆಳೆದಿದ್ದೆ. ನಾನು ತಮ್ಮ ಜೀವನದಲ್ಲಿ ಶಾಪವಾಗಿ ಬಂದಿದ್ದೇನೆ ಎಂದು ನನ್ನ ತಾಯಿ ಆಗಾಗ್ಗೆ ತಂದೆಯ ಬಳಿ ಹೇಳುತ್ತಿದ್ದಳು. ಹೀಗಾಗಿ ‘‘ಓ ದೇವರೇ, ನನಗೊಂದಿಷ್ಟು ಬಿಳಿಯ ಬಣ್ಣ, ಎತ್ತರ ಮತ್ತು ಸುಂದರವಾದ ಶರೀರ ಕೊಡು ’’ ಎಂದು ದಿನನಿತ್ಯವೂ ಬೇಡಿಕೊಳ್ಳುತ್ತಿದ್ದೆ.

 ಕೊನೆಗೂ ನನ್ನ ತಂದೆ ವರನಿಗೆ ಸುಳ್ಳು ಭರವಸೆಗಳನ್ನು ನೀಡಿ ನನ್ನ ಮದುವೆಯನ್ನು ನಿಗದಿ ಮಾಡಿದ್ದ. ‘ಉದಾರ ಮನಸ್ಸಿನ’ಆ ವ್ಯಕ್ತಿ ಗ್ರಾಮದಲ್ಲಿಯೇ ಅತ್ಯಂತ ಕುರೂಪಿ ಯಾಗಿದ್ದ ನನ್ನನ್ನು ಮದುವೆ ಮಾಡಿಕೊಂಡಿದ್ದ. ಒಂದೇ ರಾತ್ರಿಯಲ್ಲಿ ಆತ ತನ್ನ ತಲೆಮಾರಿನವರಲ್ಲಿ ಅತ್ಯಂತ ದಯಾಳು ವ್ಯಕ್ತಿಯಾಗಿಬಿಟ್ಟಿದ್ದ. ಮನೆಗೆ ಮತ್ತೆಂದೂ ಮರಳದಂತೆ ನನಗೆ ಸ್ಪಷ್ಟವಾಗಿ ತಿಳಿಸಲಾಗಿತ್ತು. ಹೀಗಾಗಿ ನನ್ನ ‘ದೊಡ್ಡ ಮನಸ್ಸಿನ ’ಗಂಡನ ಪ್ರತಿಯೊಂದೂ ಆದೇಶ ಪಾಲನೆಯ ಹೊರತು ನನಗೆ ಬೇರೆ ಮಾರ್ಗವಿರಲಿಲ್ಲ. ತನ್ನ ಗಂಡನನ್ನು ಎಲ್ಲಿ ಕಳೆದುಕೊಂಡು ಬಿಡುತ್ತೇನೋ ಎಂದು ಪ್ರತಿಯೊಬ್ಬ ಕಪ್ಪುಹುಡುಗಿಗೂ ಕಾಡುವ ಭೀತಿ ನನ್ನನ್ನೂ ಸದಾ ಕಾಡುತ್ತಿತ್ತು.

ನನ್ನ ತಂದೆ ಸುಳ್ಳು ಭರವಸೆಗಳನ್ನು ನೀಡಿ ನನ್ನ ಮದುವೆ ಮಾಡಿಸಿದ್ದರಿಂದ ನನ್ನ ಗಂಡ ಪ್ರತಿದಿನ ನನ್ನನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದ. ಎಲ್ಲ ತಪ್ಪೂ ನನ್ನದೇ ಎನ್ನುವುದು ಗೊತ್ತಿದ್ದರಿಂದ ನಾನು ತುಟಿಪಿಟಕ್ಕೆನ್ನುತ್ತಿರಲಿಲ್ಲ.

ಅದೊಂದು ದಿನ ಆತ ನನ್ನ ಪಾದದ ಮೇಲೆ ಬಿಸಿನೀರು ಸುರಿದಿದ್ದ, ನಾನು ಮೌನವಾಗಿದ್ದೆ. ನನ್ನದಲ್ಲವಾದ ಪ್ರತಿಯೊಂದನ್ನೂ ಕಳೆದುಕೊಳ್ಳುವ ಭೀತಿಯಲ್ಲಿ ಅದೆಷ್ಟೋ ರಾತ್ರಿಗಳನ್ನು ನಾನು ನಿದ್ರೆಯಿಲ್ಲದೆ ಕಳೆದಿದ್ದೇನೆ. ಒಂದು ದಿನ ನಾನು ಊಟಕ್ಕೆ ಕುಳಿತಿದ್ದಾಗ ಆತ ಏಕಾಏಕಿ ಹಿಂದಿನಿಂದ ಬಂದು ನನ್ನನ್ನು ಒದ್ದಿದ್ದ. ಮುಗ್ಗರಿಸಿ ನೆಲಕ್ಕೆ ಬಿದ್ದ ನಾನು ಎಚ್ಚರವಾಗಿಯೇ ಇದ್ದೆ. ಹತ್ತಿರದಲ್ಲಿಯೇ ಬಿದ್ದಿದ್ದ ದೊಣ್ಣೆಯೊಂದನ್ನೆತ್ತಿಕೊಂಡು ಆತನಿಗೆ ಮತ್ತೆ ದಾಳಿಯ ಅವಕಾಶವನ್ನೇ ನೀಡದೇ ಥಳಿಸತೊಡಗಿದ್ದೆ. ನನ್ನ ಜೀವಮಾನವಿಡೀ ನನ್ನನ್ನು ಅವಮಾನಿಸುತ್ತಲೇ ಬಂದಿದ್ದ ಪ್ರತಿಯೊಬ್ಬ ವ್ಯಕ್ತಿಯನ್ನೂ ನಾನು ಥಳಿಸುತ್ತಿದ್ದೆ, ನನ್ನ ಹೃದಯಕ್ಕೆ ಘಾಸಿಯನ್ನುಂಟು ಮಾಡಿದ್ದ ಪ್ರತಿಯೊಬ್ಬರನ್ನೂ ಥಳಿಸುತ್ತಿದ್ದೆ. ನನ್ನನ್ನು ಯಾರೊಬ್ಬರೂ ತಡೆಯಲಿಲ್ಲ ಮತ್ತು ಅವರೆಲ್ಲರ ಮುಖಗಳಲ್ಲಿ ಭೀತಿ ತುಂಬಿರುವದನ್ನು ನಾನು ಕಂಡಿದ್ದೆ.

ಅಂದೇ ನಾನು ನನ್ನ ಪುಟ್ಟಮಗನನ್ನು ಎತ್ತಿಕೊಂಡು ಆ ಮನೆಯಿಂದ ಹೊರಬಿದ್ದಿದ್ದೆ. ಆ ಬಳಿಕ ಒಂದೇ ಒಂದು ಸಲವೂ ನಾನು ಕಣ್ಣೀರು ಹಾಕಲಿಲ್ಲ. ನನ್ನನ್ನು ಸುಂದರಿಯಾಗಿ ಸೆಂದು ದೇವರನ್ನೆಂದೂ ಪ್ರಾರ್ಥಿಸಲಿಲ್ಲ. ನನ್ನನ್ನು ಪ್ರೀತಿಸಿ ಎಂದು ಯಾರನ್ನೂ ಎಂದೂ ಬೇಡಲಿಲ್ಲ.

 ನಾನೀಗ ಕೂಲಿಯಾಗಿ ದುಡಿಯುತ್ತಿದ್ದೇನೆ. ಕೆಲಸದ ಸ್ಥಳದಲ್ಲಿ ಕಪ್ಪುಬಣ್ಣದ ಪುಟ್ಟ ಹುಡುಗಿಯರು ಕಂಡಾಗಲೆಲ್ಲ ನಾನು ಸದಾ ಅವರತ್ತ ಮುಗುಳ್ನಗು ಬೀರುತ್ತೇನೆ. ಅವರೆಷ್ಟು ಚೆಂದವಾಗಿದ್ದಾರೆ ಎನ್ನುವುದನ್ನು ಅವರಿಗೆ ತಿಳಿಸುತ್ತೇನೆ. ಕಪ್ಪುಹುಡುಗಿ ಸುಂದರಿಯಾಗು ವುದು ಹೇಗೆ ಎಂದು ಅವರು ಅಚ್ಚರಿಯಿಂದ ಪ್ರಶ್ನಿಸುತ್ತಾರೆ. ‘‘ಸುಂದರ ಹೃದಯವಿ ರುವವರು ಮಾತ್ರ ಸುಂದರವಾಗಿರುತ್ತಾರೆ’’ಎಂದು ನಾನು ಅವರಿಗೆ ಉತ್ತರಿಸುತ್ತೇನೆ.

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News