×
Ad

ದಿಲ್ಲಿಗೆ ಬಂದ ಕುಂಙಾಲಿಕುಟ್ಟಿಗೆ ಆಂಟನಿ ನೀಡಿದ ಸಲಹೆ ಏನು ?

Update: 2017-05-11 14:36 IST

ಹೊಸದಿಲ್ಲಿ, ಮೇ 11: ಕೇರಳದ ಗಾಳಿ ದಿಲ್ಲಿಯಲ್ಲಿರುವುದು. ಇದರಿತು ದಿಲ್ಲಿಯಲ್ಲಿ ಕೆಲಸಮಾಡಬೇಕಿದೆ ಎಂದು ಮಲಪ್ಪುರಮ್ ಉಪಚುನಾವಣೆಯಲ್ಲಿ ಸಂಸದರಾಗಿ ಚುನಾಯಿತರಾದ ಮುಸ್ಲಿಂ ಲೀಗ್ ಅಖಿಲಭಾರತ ಪ್ರಧಾನಕಾರ್ಯದರ್ಶಿಪಿ.ಕೆ.ಕುಂಙಾಲಿಕುಟ್ಟಿ ಅವರಿಗೆ ಮಾಜಿ ಕೇಂದ್ರಸಚಿವ ಎ.ಕೆ. ಆಂಟನಿ ಕಿವಿಮಾತು ಹೇಳಿದ್ದಾರೆ. ಹೊಸದಿಲ್ಲಿ ಕೇರಳ ಹೌಸ್‌ನಲ್ಲಿ ಪಿ.ಕೆ.ಕುಂಙಾಲಿಕುಟ್ಟಿಗೆ ದಿಲ್ಲಿಯ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ ಆಯೋಜಿಸಿದ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತಾಡುತ್ತಿದ್ದರು. ಪಿ.ಕೆ.ಕುಂಙಾಲಿಕುಟ್ಟಿ ಈಗ ಬಂದಿದ್ದಾರೆ. ನಾನು ಸ್ವಲ್ಪಮೊದಲೇ ಬಂದೆ. ಈ ಅನುಭವದ ಆಧಾರದಲ್ಲಿ ತಾನು ಅವರಿಗೆ ಈ ಮಾತು ಹೇಳುತ್ತಿದ್ದೇನೆ ಎಂದು ಆಂಟನಿ ಹೇಳಿದರು. ದಿಲ್ಲಿಯಲ್ಲಿ ಕೇರಳದಂತೆ ಕೆಲಸ ಮಾಡಲುಸಾಧ್ಯವಿಲ್ಲ. ಆದರೆ ಪಿ.ಕೆ.ಕುಂಙಾಲಿಕುಟ್ಟಿ ಸಮಸ್ಯೆಹುಟ್ಟುಹಾಕುವವರಲ್ಲ. ಸಮಸ್ಯೆ ಬಗೆಹರಿಸುವವರು. ಆದ್ದರಿಂದ ದಿಲ್ಲಿಯ ಅನುಭವ ಅವರಿಗೆ ತಲೆನೋವಾಗಲಾರದು ಎಂದು ಆಂಟನಿ ಅಭಿಪ್ರಾಯ ವ್ಯಕ್ತಪಡಿಸಿದರು. ದೇಶಕ್ಕೆ ಅಪಾಯಕಾರಿಯಾದ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರು ಮತ್ತು ಕಾಂಗ್ರೆಸ್ ಸಹಿತ ಜಾತ್ಯತೀತ ಮೈತ್ರಿಕೂಟ ರೂಪಿಸಲು ಪಿ.ಕೆ.ಕುಂಙಾಲಿಕುಟ್ಟಿಗೆಸಾಧ್ಯವಿದೆ ಎಂದು ಈ ಸಂದರ್ಭದಲ್ಲಿಮುಸ್ಲಿಂ ಲೀಗ್ ರಾಷ್ಟ್ರಾಧ್ಯಕ್ಷ ಖಾದರ್ ಮೊಯ್ದಿನ್ ಹೇಳಿದರು.

ಖಾದರ್ ಮೊಯ್ದಿನ್ ಪಿ.ಕೆ.ಕುಂಙಾಲಿಕುಟ್ಟಿಗೆ ಶಾಲು ಹೊದಿಸಿ ಅಭಿನಂದಿಸಿದರು. ಎ.ಕೆ. ಆಂಟನಿ , ಬಿಷಪ್ ಜೇಕಬ್ ಮಾರ್ ಬರ್ನಾಬಾಸ್, ಸ್ವಾಮಿನಿಜಾಮೃತಾನಂದ , ಕೇರಳ ನದ್ವತುಲ್ ಮುಜಾಹಿದೀನ್ ನಾಯಕ ಹುಸೈನ್ ಮಡವೂರ್, ಎನ್.ಎಸ್.ಎಸ್. ಉಪಾಧ್ಯಕ್ಷ ಬಾಬು ಪಣಿಕ್ಕರ್, ದಿಲ್ಲಿ ಮಲೆಯಾಳಿಗರ ಅಸೋಸಿಯೇಶನ್ ಅಧ್ಯಕ್ಷ ಸಿ. ಚಂದ್ರನ್, ಸಂಸದರಾದ ಇಟಿ ಮುಹಮ್ಮದ್ ಬಶೀರ್, ಪಿ.ವಿ. ಅಬ್ದುಲ್ ವಹಾಬ್, ಶಾಸಕ ಪಿ.ಕೆ. ಬಶೀರ್, ಕೆಪಿಎ ಮಜೀದ್, ಅಡ್ವೊಕೇಟ್ ಹಾರಿಸ್ ಬೀರಾನ್ ಮುಂತಾದವರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News