×
Ad

ಪಾನ್ ಜೊತೆ ಆಧಾರ್ ಜೋಡಣೆಗೆ ನೂತನ ಸೌಲಭ್ಯಕ್ಕೆ ಚಾಲನೆ

Update: 2017-05-11 20:49 IST

ಹೊಸದಿಲ್ಲಿ,ಮೇ 11: ವ್ಯಕ್ತಿಯ ಆಧಾರ್‌ನ್ನು ಪಾನ್‌ನೊಂದಿಗೆ ಜೋಡಣೆಗೊಳಿಸಲು ನೂತನ ಇ-ಸೌಲಭ್ಯವನ್ನು ಆದಾಯ ತೆರಿಗೆ ಇಲಾಖೆಯು ಪ್ರಾರಂಭಿಸಿದೆ. ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಆಧಾರ್ ಪಾನ್‌ನೊಂದಿಗೆ ಜೋಡಣೆಯನ್ನು ಈಗ ಕಡ್ಡಾಯಗೊಳಿಸಲಾಗಿದೆ.

ಈ ಜೋಡಣೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಇಲಾಖೆಯ ಇ-ಫೈಲಿಂಗ್ ಜಾಲತಾಣದ ಹೋಮ್‌ಪೇಜ್‌ನಲ್ಲಿ ಹೊಸ ಕೊಂಡಿಯೊಂದನ್ನು ನೀಡಲಾಗಿದೆ. ವ್ಯಕ್ತಿಯು ತನ್ನ ಪಾನ್ ಸಂಖ್ಯೆ,ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್‌ನಲ್ಲಿ ನೀಡಲಾಗಿರುವ ಹೆಸರನ್ನು ಯಥಾವತ್ತಾಗಿ ಪಂಚ್ ಮಾಡುವುದನ್ನು ಈ ಕೊಂಡಿಯು ಅಗತ್ಯವಾಗಿಸುತ್ತದೆ.

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದಿಂದ ಪರಿಶೀಲನೆಯ ಬಳಿಕ ಈ ಲಿಂಕಿಂಗ್‌ನ್ನು ದೃಢಪಡಿಸಲಾಗುತ್ತದೆ. ಆಧಾರ್ ಹೆಸರಿನಲ್ಲಿ ಸಣ್ಣಪುಟ್ಟ ವ್ಯತ್ಯಾಸವಿದ್ದರೆ ಒಂದು ಬಾರಿಯ ಪಾಸ್‌ವರ್ಡ್ ಅಗತ್ಯವಾಗುತ್ತದೆ ಎಂದು ಇಲಾಖೆಯು ತಿಳಿಸಿದೆ. ಇಲಾಖೆಯು ಈ ಬಗ್ಗೆ ವಿವರವಾದ ಸಲಹೆಗಳನ್ನು ತೆರಿಗೆದಾತರಿಗೆ ರವಾನಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News