×
Ad

ರೋಹಿತ್ ಶೆಟ್ಟಿ ಚಿತ್ರಕ್ಕೆ ರಣವೀರ್ ಹೀರೋ

Update: 2017-05-12 19:23 IST

‘ಚೆನ್ನೈ ಎಕ್ಸ್‌ಪ್ರೆಸ್’, ‘ಸಿಂಗಂ’ ಖ್ಯಾತಿಯ ನಿರ್ದೇಶಕ ರೋಹಿತ್ ಶೆಟ್ಟಿ ಶೀಘ್ರದಲ್ಲೇ ಆ್ಯಕ್ಷನ್ ಕಟ್ ಹೇಳಲಿರುವ ಚಿತ್ರದಲ್ಲಿ ಬಾಲಿವುಡ್‌ನ ಜನಪ್ರಿಯ ನಟ ರಣವೀರ್‌ಸಿಂಗ್ ಅಭಿಯಿಸುವುದು ಬಹುತೇಕ ಖಚಿತವಾಗಿದೆ. ಸಂಪೂರ್ಣ ಆ್ಯಕ್ಷನ್ ಥ್ರಿಲ್ಲರ್ ಕಥಾವಸ್ತುವನ್ನು ಹೊಂದಿರುವ ಈ ಚಿತ್ರದ ಬಗ್ಗೆ ರೋಹಿತ್‌ಶೆಟ್ಟಿ ಈಗಾಗಲೇ ರಣವೀರ್‌ಸಿಂಗ್ ಜೊತೆ ಚರ್ಚಿಸಿದ್ದಾರೆ. ಚಿತ್ರಕಥೆಯು ರಣವೀರ್‌ಗೆ ಹಿಡಿಸಿದ್ದು, ಚಿತ್ರದಲ್ಲಿ ನಾಯಕನಾಗಿ ನಟಿಸಲು ಅವರು ಗ್ರೀನ್‌ಸಿಗ್ನಲ್ ನೀಡಿದ್ದಾರೆಂದು ರೋಹಿತ್ ಶೆಟ್ಟಿ ಹೇಳಿದ್ದಾರೆ.

ಸದ್ಯ ರೋಹಿತ್ ಅವರು ಅಜಯ್‌ದೇವಗನ್, ಪರಿಣತಿ ಚೋಪ್ರಾ ತಬು ಪ್ರಮುಖ ಪಾತ್ರಗಳಲ್ಲಿರುವ ‘ಗೋಲ್‌ಮಾಲ್ ಎಗೈನ್’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆ ಚಿತ್ರದ ಕೆಲಸ ಪೂರ್ಣಗೊಂಡ ಬಳಿಕ ಅವರು ರಣವೀರ್ ಅಭಿನಯದ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ.

ಶಾರುಕ್-ಕಾಜಲ್ ಅಭಿನಯದ ‘ದಿಲ್‌ವಾಲೆ’, ರೋಹಿತ್ ಶೆಟ್ಟಿ ನಿರ್ದೇಶನದ ಕೊನೆಯ ಚಿತ್ರವಾಗಿತ್ತು. ಆ ಚಿತ್ರವು ಬಾಕ್ಸ್‌ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಾಧಿಸುವಲ್ಲಿ ವಿಫಲವಾಗಿತ್ತು. ಚಿತ್ರಕಥೆಯಲ್ಲಿ ಬದಲಾವಣೆಗಳನ್ನು ಮಾಡಿದ್ದುದೇ ‘ದಿಲ್‌ವಾಲೆ’ ಚಿತ್ರದ ಸೋಲಿಗೆ ಕಾರಣವೆಂದು ರೋಹಿತ್‌ಶೆಟ್ಟಿ ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News