ಬಿಹಾರ: ಪಿಸ್ತೂಲು ತೋರಿಸಿ ಮಾಜಿ ಸಚಿವನ ಪತ್ನಿಯ ಚಿನ್ನದ ಸರ ದೋಚಿದರು

Update: 2017-05-12 14:17 GMT

ಪಾಟ್ನಾ,ಮೇ 12: ಬೈಕೊಂದರಲ್ಲಿ ಬಂದಿದ್ದ ಖದೀಮರು ಬಿಹಾರದ ಮಾಜಿ ಸಚಿವರೋರ್ವರ ಪತ್ನಿಯ ಚಿನ್ನದ ಸರವನ್ನು ದೋಚಿರುವ ಘಟನೆ ಶುಕ್ರವಾರ ಇಲ್ಲಿಯ ಕಂಕರಬಾಗ್ ಪ್ರದೇಶದಲ್ಲಿ ನಡೆದಿದೆ.

 1970ರ ದಶಕದಲ್ಲಿ ರಾಮ ಸುಂದರ ದಾಸ್ ನೇತೃತ್ವದ ಸರಕಾರದಲ್ಲಿ ಸಚಿವರಾಗಿದ್ದ ಮಿಥಿಲೇಶ ಕುಮಾರ ಸಿಂಗ್ ಅವರು ಪತ್ನಿ ಸುಪ್ರಭಾ ಜೊತೆಗೆ ಬೆಳಗಿನ ವಾಯುವಿಹಾರಕ್ಕೆ ತೆರಳಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದಿದ್ದ ಮೂವರು ಅಪರಿಚಿತ ವ್ಯಕ್ತಿಗಳು ಪಿಸ್ತೂಲು ತೋರಿಸಿ ಸುಪ್ರಭಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.

ನಾವು ಪೊಲೀಸ್ ದೂರನ್ನು ದಾಖಲಿಸಿದ್ದೇವೆ. ಆದರೆ ಸರಗಳ್ಳರು ಸಿಗುತ್ತಾರೆಂಬ ಭರವಸೆಯಿಲ್ಲ ಎಂದು ಸುಪ್ರಭಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News