×
Ad

ಪೂರ್ಣಕಾಲಿಕ ರಕ್ಷಣಾ ಸಚಿವರನ್ನು ನೇಮಿಸದ ಕೇಂದ್ರ: ಶಿವಸೇನೆ ಟೀಕೆ

Update: 2017-05-12 21:23 IST

ಮುಂಬೈ, ಮೇ 12: ದೇಶಕ್ಕೆ ಪೂರ್ಣಕಾಲಿಕ ರಕ್ಷಣಾ ಸಚಿವರ ಅಗತ್ಯವಿದ್ದರೂ ಈ ಮಹತ್ವದ ವಿಷಯದಲ್ಲಿ ನಿರ್ಲಕ್ಷದ ಧೋರಣೆ ತಳೆಯುವ ಮೂಲಕ ಕೇಂದ್ರ ಸರಕಾರ ದೇಶದ ಭದ್ರತೆಯ ವಿಷಯದಲ್ಲಿ ಆಟವಾಡುತ್ತಿದೆ ಎಂದು ಶಿವಸೇನೆ ಟೀಕಿಸಿದೆ.

 ರಕ್ಷಣಾ ಸಚಿವರು ಬದಲಾಗಿ ಮೂರು ತಿಂಗಳಾಯಿತು. ಆದರೂ ಇದುವರೆಗೆ ಪೂರ್ಣಕಾಲಿಕ ರಕ್ಷಣಾ ಸಚಿವರ ನೇಮಕವಾಗಿಲ್ಲ. ಭಾರತದಂತಹ ಬೃಹತ್ ದೇಶದಲ್ಲಿ ಪೂರ್ಣಕಾಲಿಕ ರಕ್ಷಣಾ ಸಚಿವರು ಇಲ್ಲದಿರುವುದು ದೇಶದ ಭದ್ರತೆಯ ವಿಷಯದಲ್ಲಿ ಕೇಂದ್ರ ಸರಕಾರದ ಬೇಕಾಬಿಟ್ಟಿ ವರ್ತನೆಗೆ ನಿದರ್ಶನವಾಗಿದೆ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಪ್ರಕಟವಾದ ಸಂಪಾದಕೀಯ ಬರಹದಲ್ಲಿ ತಿಳಿಸಲಾಗಿದೆ. ದೇಶದ ಜನತೆ ಇದಕ್ಕೆ (ಬಿಜೆಪಿ ನೇತೃತ್ವದ ಸರಕಾರವನ್ನು ಅಧಿಕಾರಕ್ಕೇರಿಸಲು) ಹೊಣೆಗಾರರು. ಈ ತಪ್ಪು ಕಾರ್ಯದ ಪ್ರತಿಫಲವನ್ನು ಈಗ ಯೋಧರು ಉಣ್ಣುವಂತಾಗಿದೆ . ರಾಷ್ಟ್ರದ ರಕ್ಷಕರು ತಾವೆಂದು ಹೇಳಿಕೊಳ್ಳುತ್ತಾ ತಿರುಗಾಡುತ್ತಿರುವವರಿಗೆ ದೇಶದ ರೈತರ ಗೋಳು ಅಥವಾ ಕ್ರೂರವಾಗಿ ಹತ್ಯೆಯಾದ ಯೋಧರ ಕುಟುಂಬಿಕರ ಅಳಲು ಕೇಳಿಸುತ್ತಿಲ್ಲ. ಕಳೆದ ಒಂದು ವರ್ಷದಲ್ಲಿ ಹತರಾದ ಸೈನಿಕರ ಪ್ರಕರಣವನ್ನು ಕೇಂದ್ರ ಸರಕಾರ ನಡೆಸಿದ ಶಿಕ್ಷಾರ್ಹ ನರಹತ್ಯೆ ಎಂದು ಪರಿಗಣಿಸಬೇಕು ಎಂದು ಶಿವಸೇನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News