ಅಬ್ರಾಮ್ ಖಾನ್ ನಿಜವಾಗಿ ಯಾರ ಮಗ?: ಇಲ್ಲಿದೆ ಶಾರುಖ್ ಖಾನ್ ಉತ್ತರ

Update: 2017-05-13 07:57 GMT

ಮುಂಬೈ, ಮೇ 13: ತನ್ನ ಮೂರು ವರ್ಷದ ಪುತ್ರ ಅಬ್ರಾಮ್ ತನ್ನ ಹಿರಿಯ ಪುತ್ರ ಆರ್ಯನ್ ನ ‘ಪ್ರೇಮದ ಕೂಸು’ ಅಲ್ಲ ಎಂದು ಬಾಲಿವುಡ್ ನಟ ಶಾರುಖ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ವಾಂಕೂವರ್ ನಲ್ಲಿ ಟೆಡ್ ಟಾಕ್ ನೀಡುತ್ತಿದ್ದ ಅವರು, ಅಬ್ರಾಮ್ ಹುಟ್ಟಿದ ಸಂದರ್ಭ ಎದ್ದಿದ್ದ ಹಲವು ಪುಕಾರುಗಳ ಬಗ್ಗೆ ಸ್ಪಷ್ಟನೆ ನೀಡುತ್ತಾ ಮೇಲಿನಂತೆ ಹೇಳಿದ್ದಾರೆ.

‘‘ನಾಲ್ಕು ವರ್ಷಗಳ ಹಿಂದೆ ನಾನು ಮತ್ತು ನನ್ನ ಪತ್ನಿ ಗೌರಿ ಮೂರನೇ ಮಗು ಪಡೆಯಲು ನಿರ್ಧರಿಸಿದ್ದೆವು. ಆದರೆ  ಹಿರಿಯ ಪುತ್ರ 15 ವರ್ಷದವನಾಗಿದ್ದ. ಕಿರಿಯ ಮಗು ಹಿರಿಯ ಪುತ್ರನ 'ಪ್ರೇಮದ ಕೂಸು' ಎಂದು ಅಂತರ್ಜಾಲದಲ್ಲಿ ಸುದ್ದಿ ಹಬ್ಬಿತ್ತು. ಆತ ಮೂರ್ಖತನದಿಂದ ರೊಮಾನಿಯಾದಲ್ಲಿ ಹುಡುಗಿಯೊಬ್ಬಳ ಕಾರನ್ನು ಚಲಾಯಿಸಿಕೊಂಡು ಹೋಗಿದ್ದೇ ಇದಕ್ಕೆ ಕಾರಣವಾಗಿತ್ತು. ಇದಕ್ಕೆ ನಕಲಿ ವೀಡಿಯೋವೊಂದು ಕೂಡಾ ಸೇರಿಕೊಂಡಿತ್ತು’’ ಎಂದು ಖಾನ್ ಹೇಳಿದ್ದಾರೆ.

ತಮ್ಮ ಕಿರಿಯ ಪುತ್ರನ ಬಗ್ಗೆ ಹೀಗೆಲ್ಲಾ ವದಂತಿ ಹರಡಿಕೊಂಡಿದ್ದರಿಂದ ತಮ್ಮ ಕುಟುಂಬ ತೀವ್ರ ನೊಂದಿತ್ತು ಎಂದು 51 ವರ್ಷದ ನಟ ಹೇಳಿಕೊಂಡಿದ್ದಾರೆ. ‘‘ಈಗ 19 ವರ್ಷದವನಾಗಿರುವ ನನ್ನ ಪುತ್ರನಿಗೆ ನೀವು 'ಹಲೊ' ಎಂದು ಹೇಳಿದರೆ ಆತ ಅತ್ತ ತಿರುಗಿ, "ನನ್ನ ಬಳಿ ಯುರೋಪಿಯನ್ ಡ್ರೈವಿಂಗ್ ಲೈಸನ್ಸ್ ಕೂಡ ಇಲ್ಲ’ ಎಂದು ಹೇಳುತ್ತಾನೆ" ಎಂದರು ಶಾರುಖ್.

ತಮಗೆ ಇಪ್ಪತ್ತು ವರ್ಷವಾಗುವುದರೊಳಗಾಗಿ ಇಬ್ಬರು ಹೆತ್ತವರನ್ನೂ ಕಳೆದುಕೊಂಡೆ ಎಂದ ಶಾರುಖ್, ನಂತರ ಸಿನಿಮಾದಲ್ಲಿ ಮಿಂಚುವ ಕನಸಿನೊಂದಿಗೆ ದಿಲ್ಲಿಯಿಂದ ಮುಂಬೈಗೆ ವಲಸೆ ಬಂದಿದ್ದನ್ನು ತಮ್ಮ ಭಾಷಣದಲ್ಲಿ ನೆನಪಿಸಿಕೊಂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News