ಟ್ರಾಫಿಕ್ ಪೋಲ್ ಗೆ ಢಿಕ್ಕಿಯಾದ ಕಾರು: ಓರ್ವ ಮೃತ್ಯು, ನಾಲ್ಕು ಮಂದಿಗೆ ಗಾಯ

Update: 2017-05-14 04:03 GMT

ಹೈದರಾಬಾದ್, ಮೇ 14: ಕಾರೊಂದು ಟ್ರಾಫಿಕ್ ಪೋಲ್ ಗೆ ಢಿಕ್ಕಿಯಾಗಿ ಇಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಹೈದರಾಬಾದ್ ನ  ಸೈಬರಾಬಾದ್ ಎಂಬಲ್ಲಿ ನಡೆದಿದೆ.

ಶನಿವಾರ ತಡರಾತ್ರಿ ಘಟನೆ ನಡೆದಿದ್ದು, ನಾಲ್ಕು ದ್ವಿಚಕ್ರ ವಾಹನಗಳು ಹಾಗೂ ಎರಡು ಕಾರುಗಳಿಗೆ ಹಾನಿಯಾಗಿದೆ.

ಕಾರು ಚಾಲಕನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News