×
Ad

ಗೋರಕ್ಷಕರಿಂದ ಯುವಕನಿಗೆ ಥಳಿತ: ಇಬ್ಬರ ಸೆರೆ

Update: 2017-05-14 19:05 IST

ಉಜ್ಜೈನ್(ಮ.ಪ್ರ),ಮೇ 14: ದನದ ಬಾಲವನ್ನು ಕತ್ತರಿಸಿದ್ದಾನೆ ಎಂಬ ಶಂಕೆಯಿಂದ ಸ್ವಯಂಘೋಷಿತ ಗೋರಕ್ಷಕರ ಗುಂಪೊಂದು ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದು, ಇದರ ವೀಡಿಯೊ ವೈರಲ್ ಆಗಿದೆ. ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿ ದ್ದಾರೆ.

ಜಿಲ್ಲೆಯ ಪೀಪ್ಲಿನಾಕಾ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ.

ದನದ ಬಾಲವನ್ನು ಕತ್ತರಿಸಿದ್ದಾನೆಂದು ಆರೋಪಿಸಿ ದುಷ್ಕರ್ಮಿಗಳ ಗುಂಪು ಅಪುಡಾ ಮಾಳವೀಯ ಎಂಬಾತನನ್ನು ಬೆಲ್ಟ್‌ಗಳಿಂದ ಥಳಿಸುತ್ತಿರುವ, ಕಾಲುಗಳಿಂದ ತುಳಿಯುತ್ತಿ ರುವ ಮತ್ತು ಮುಷ್ಟಿಗಳಿಂದ ಗುದ್ದುತ್ತಿರುವ ದೃಶ್ಯ ವೀಡಿಯೊದಲ್ಲಿ ದಾಖಲಾಗಿದೆ.

ಆದರೆ,ಹಣಕಾಸಿನ ವಿವಾದದಲ್ಲಿ ಆರೋಪಿಗಳು ಮಾಳವೀಯನ ಮೇಲೆ ಹಲ್ಲೆ ನಡೆಸಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಚೇತನ್ ಸಾಂಖ್ಲಾ ಮತ್ತು ವಿಕಾಸ್ ಅಲಿಯಾಸ್ ಭುರಾ ಎನ್ನುವ ವರನ್ನು ಪೊಲೀಸರು ಬಂಧಿಸಿದ್ದು, ನಿಲೇಶ್ ಸಾಂಖ್ಲಾ ಮತ್ತು ಶುಭಂ ತಲೆ ಮರೆಸಿ ಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News