ಚಲಿಸುತ್ತಿದ್ದ ಕಾರಿನಲ್ಲಿ ಯುವತಿಯ ಅತ್ಯಾಚಾರಗೈದು, ರಸ್ತೆಗೆಸೆದ ದುಷ್ಕರ್ಮಿಗಳು

Update: 2017-05-14 17:44 GMT

ಗುರುಗ್ರಾಂ, ಮೇ 14: ಚಲಿಸುತ್ತಿದ್ದ ಕಾರಿನಲ್ಲಿ ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಮೂವರು ದುಷ್ಕರ್ಮಿಗಳು ಆಕೆಯನ್ನು ರಸ್ತೆಗೆ ಎಸೆದು ಹೋದ ಪೈಶಾಚಿಕ ಘಟನೆ ದೆಹಲಿಯಲ್ಲಿ ನಡೆದಿದೆ.

ಸಿಕ್ಕಿಂ ಮೂಲದ 22ರ ಹರೆಯದ ಯುವತಿ ದೆಹಲಿಯಿಂದ ತನ್ನ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ದುಷ್ಕರ್ಮಿಗಳು ಆಕೆಯನ್ನು ಅತ್ಯಾಚಾರಗೈದಿದ್ದಾರೆ.

ಯುವತಿಯು ಮನೆಗೆ ಸಮೀಪದಲ್ಲಿರುವಾಗಲೇ ಆಗಮಿಸಿದ ಮೂವರು ಆಕೆಯನ್ನು ಕಾರಿನೊಳಗೆ ಹಾಕಿ ಚಲಿಸುತ್ತಿದ್ದ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರಗೈದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಂತರ ಯುವತಿಯನ್ನು ರಸ್ತೆಗೆಸೆದ ಮೂವರು ಅಲ್ಲಿಂದ ಪರಾರಿಯಾಗಿದ್ದಾರೆ. ರಸ್ತೆಯಲ್ಲೇ ಬಿದ್ದಿದ್ದ ಯುವತಿ ದಾರಿಹೋಕರ ಸಹಾಯ ಕೋರಿದ್ದು, ಅವರು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

“ಯುವತಿಯ ಹೇಳಿಕೆಯನ್ನಾಧರಿಸಿ ನಾವು ಸಿಸಿ ಕ್ಯಾಮರಾ ದೃಶ್ಯಗಳ ಮೂಲಕ ವಾಹನಗಳ ಮೇಲೆ ಕಣ್ಣಿರಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News