×
Ad

ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತ್ಯು: 42 ಮಂದಿಗೆ ಗಾಯ

Update: 2017-05-15 10:25 IST

ಮಧ್ಯಪ್ರದೇಶ, ಮೇ 15: ರಸ್ತೆ ಅಪಘಾತವೊಂದರಲ್ಲಿ ಮೂವರು ಮೃತಪಟ್ಟು 42 ಮಂದಿ ಗಾಯಗೊಂಡ ಘಟನೆ  ಇಲ್ಲಿನ ದಿಂಡೂರಿ ಎಂಬಲ್ಲಿ ಸಂಭವಿಸಿದೆ.

ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆಯಲ್ಲಿ ಪಲ್ಟಿಯಾದ ಪರಿಣಾಮ ಮೂವರು ಮೃತಪಟ್ಟಿದ್ದು, 42 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಕರಂಜಿಯಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ 12 ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಅಮರ್ ಕಂಟಕ್ ನಲ್ಲಿ ನಡೆದ ನರ್ಮದಾ ಸೇವಾ ಯಾತ್ರೆಗೆ ತೆರಳುತ್ತಿದ್ದ ಬಸ್ ಇದಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News