ಬಹು ಪತ್ನಿತ್ವ, ನಿಖಾ ಹಲಾಲಾ ಕಾನೂನು ಮಾನ್ಯತೆ ಕುರಿತು ಪರಿಶೀಲನೆ : ಸುಪ್ರೀಂ
ಹೊಸದಿಲ್ಲಿ, ಮೇ 15: ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ಬಹು ಪತ್ನಿತ್ವ ಹಾಗೂ ನಿಖಾ ಹಲಾಲಾ ಆಚರಣೆಯ ಕಾನೂನು ಮಾನ್ಯತೆ ಕುರಿತು ಪರಿಶೀಲನೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ತ್ರಿವಳಿ ತಲಾಖ್ ಬಗ್ಗೆ ವಿಚಾರಣೆಯನ್ನು ಮುಂದುವರಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹರ್ ನೇತೃತ್ವದ ಪಂಚ ಸದಸ್ಯ ಪೀಠವು ಏಕಕಾಲದಲ್ಲಿ ತ್ರಿವಳಿ ತಲಾಖ್, ಬಹುಪತ್ನಿತ್ವ, ನಿಖಾ ಹಲಾಲಾ ಬಗ್ಗೆ ವಿಚಾರಣೆ ಸಾಧ್ಯವಾಗುವುದಿಲ್ಲ. ಹೀಗಾಗಿ ಬಹುಪತ್ನಿತ್ವ, ನಿಖಾ ಹಲಾಲಾ ಕಾನೂನು ಮಾನ್ಯತೆ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸುವುದಾಗಿ ಹೇಳಿದೆ.
ಆಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು, ಕೇಂದ್ರ ಸರಕಾರದ ಪರ ತಮ್ಮ ವಾದ ಮಂಡಿಸಿ ತ್ರಿವಳಿ ತಲಾಖ್ ನಂತೆಯೇ ನಿಖಾ ಹಲಾಲಾ ಮತ್ತು ಬಹುಪತ್ನಿತ್ವದ ಕುರಿತೂ ಕೂಡ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು..
ಇದಕ್ಕೆ ಉತ್ತರಿಸಿದ ಪಂಚ ಸದಸ್ಯ ಪೀಠ ಪ್ರಸ್ತುತ ನ್ಯಾಯಾಲಯಕ್ಕೆ ಎಲ್ಲ ವಿಚಾರಗಳನ್ನು ಒಮ್ಮೆಲೆ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಇವುಗಳ ಕಾನೂನು ಮಾನ್ಯತೆ ಬಗ್ಗೆ ಖಂಡಿತಾ ಚರ್ಚಿಸುತ್ತೇವೆ ಪ್ರಸ್ತುತ ತ್ರಿವಳಿ ತಲಾಖ್ ಬಗ್ಗೆ ಮಾತ್ರ ವಿಚಾರಣೆ ಸಾಧ್ಯ ಎಂದು ಹೇಳಿದೆ