ಕುಲದೀಪ್ ಜಾಧವ್ ಗೆ ಗಲ್ಲು ; ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ
ಹೊಸದಿಲ್ಲಿ, ಮೇ 20:ದೀಪಕ್ ಮಿತ್ತಲ್ ವಾದ ಮಂಡನೆ ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನ ವಿಧಿಸಿರುವ ಗಲ್ಲು ಶಿಕ್ಷೆ ಹಿನ್ನೆಲೆಯಲ್ಲಿ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇಂದು ವಿಚಾರಣೆ ಆರಂಭಗೊಂಡಿದೆ.
ಜಸ್ಟೀಸ್ ರೋನಿ ಅಬ್ರಹಾಂ ಪೀಠದ ಮುಂದೆ ವಾದ ಮಂಡಿಸಿದ ಹಿರಿಯ ವಕೀಲರಾದ ಹರೀಶ್ ಸಾಳ್ವೆ"ಪಾಕಿಸ್ತಾನ ಅನ್ಯಾಯವಾಗಿ ಕುಲಭೂಷಣ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಎಲ್ಲಾ ನಿಯಮಗಳನ್ನು ಪಾಕ್ ಗಾಳಿಗೆ ತೂರಿದೆ.ಅವರ ವಿರುದ್ಧ ಸಲ್ಲಿಸಿರುವ ಚಾರ್ಜ್ ಶೀಟ್ ಪ್ರತಿಯನ್ನು ಭಾರತಕ್ಕೆ ನೀಡಲಾಗಿಲ್ಲ. ಅವರಿಗೆ ವಿಧಿಸಲಾದ ಗಲ್ಲು ಶಿಕ್ಷೆಯನ್ನು ರದ್ದುಪಡಿಸಬೇಕು '' ಎಂದು ವಾದ ಮಂಡಿಸಿದರು
ಭಾರತದ ಪರ ವಾದ ಮಂಡಿಸಿದವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯದರ್ಶಿ ದೀಪಕ್ ಮಿತ್ತಲ್ ಅವರು ಕುಲಭೂಷಣ್ ವಿಚಾರದಲ್ಲಿ ವಿಯೆನ್ನಾ ಒಪ್ಪಂದದ ನಿಯಮ ಉಲ್ಲಂಘನೆಯಾಗಿದೆ. ಜಾಧವ್ ಗೆ ವಾದಿಸಲು ಯಾವುದೇ ಅವಕಾಶ ನೀಡಿಲ್ಲ. ಜಾಧವ್ ತಂದೆ, ತಾಯಿಗೆ ಪಾಕಿಸ್ತಾನಕ್ಕೆ ತೆರಳಲು ವೀಸಾ ನೀಡಲಾಗಿಲ್ಲ. ಅವರ ಭೇಟಿಗೆ ಅವಕಾಶ ನೀಡಲಾಗಿಲ್ಲ. ಭಾರತದ ಮನವಿಯನ್ನು ಪಾಕ್ ಪರಿಗಣಿಸಿಲ್ಲ. ಪಾಕಿಸ್ತಾನ ಕೋರ್ಟ್ ನಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.
ಭಾರತಕ್ಕೆ 2016ರಿಂದ ಕುಲದೀಪ್ ಜಾಧವ್ ಬಗ್ಗೆ ಮಾಹಿತಿ ನೀಡಲಾಗಿಲ್ಲ. ಅವರ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ಪಾಕಿಸ್ತಾನದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಯಾವುದೇ ನಿಯಮವನ್ನು ಪಾಕಿಸ್ತಾನ ಪಾಲಿಸಿಲ್ಲ ಎಂದು ನ್ಯಾಯಾಲಯದಲ್ಲಿ ವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯದರ್ಶಿ ವಿ.ಡಿ ಶರ್ಮ ವಾದ ಮಂಡಿಸಿದರು.