ರೂ.1000 ಕೋಟಿ ಕ್ಲಬ್ ಸೇರಿದ ದಂಗಲ್; ಚೀನಾದಲ್ಲಿ ದಾಖಲೆ ಗಳಿಕೆ

Update: 2017-05-15 11:12 GMT

ಹೊಸದಿಲ್ಲಿ,ಮೇ 15 : ಎಸ್ ಎಸ್ ರಾಜಮೌಳಿಯವರ ‘ಬಾಹುಬಲಿ-ದಿ ಕಂಕ್ಲೂಶನ್’ ಚಿತ್ರದ ನಂತರ ಆಮಿರ್ ಖಾನ್ ಅವರ ಬಹು ಚರ್ಚಿತ ಹಾಗೂ ಯಶಸ್ವೀ ಚಿತ್ರ ‘ದಂಗಲ್’ 1000 ಕೋಟಿ ಕ್ಲಬ್ ಸೇರಿದೆ. ಚೀನಾದಲ್ಲಿ ಮೇ 5ರಂದು ‘ಶಾವುಯಿ ಜಿಯಾವೊ ಬಾಬಾ’ (ಲೆಟ್ ಅಸ್ ರೆಸ್ಲ್ ಡ್ಯಾಡ್) ಎಂಬ ಹೆಸರಿನಲ್ಲಿ ಬಿಡುಗಡೆಯಾದ ಕೇವಲ ಹತ್ತೇ ದಿನಗಳಲ್ಲಿ ಚಿತ್ರ ರೂ. 282.69 ಕೋಟಿ ಬಾಚಿ ಇಷ್ಟೊಂದು ಕಡಿಮೆ ಅವಧಿಯಲ್ಲಿ ಚೀನಾದಲ್ಲಿ ಇಷ್ಟೊಂದು ಗಳಿಕೆ ಮಾಡಿದ ಪ್ರಪ್ರಥಮ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದಂಗಲ್ ಇಲ್ಲಿ ತನಕ ಭಾರತದಲ್ಲಿ ರೂ.387.38 ಕೋಟಿ ಬಾಚಿದೆ. ಎರಡನೇ ವಾರಾಂತ್ಯಕ್ಕೆ ಅದರ ಗಳಿಕೆ ರೂ.208.84 ಕೋಟಿಯಾಗಿತ್ತು ಎಂದು ಚಿತ್ರ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಹೇಳಿದ್ದಾರೆ.

ಕುಸ್ತಿ ಪಟು ಮಹಾವೀರ ಫೋಗಟ್ ಅವರು ಪುರುಷ ಪ್ರಧಾನ ಸಮಾಜದಲ್ಲಿ ತಮ್ಮ ಇಬ್ಬರು ಪುತ್ರಿಯರನ್ನು ಕುಸ್ತಿ ಪಟುಗಳನ್ನಾಗಿಸುವ ಕಥಾವಸ್ತುವಿರುವ ದಂಗಲ್ ಚೀನಾದ ಜನರ ಮನಗೆಲ್ಲುವಲ್ಲಿ ಸಫಲವಾಗಿದೆ. ಚೀನಾದ ಒಟ್ಟು 9000 ಚಿತ್ರಮಂದಿರಗಳಲ್ಲಿ ದಂಗಲ್ ತೆರೆ ಕಂಡಿದ್ದು ಪ್ರಥಮ ವಾರದಲ್ಲಿಯೇ ರೂ.200 ಕೋಟಿ ಬಾಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News