×
Ad

ಬಾಹುಬಲಿ ದಾಖಲೆಯನ್ನು ಛಿದ್ರ ಮಾಡುತ್ತಾ 'ಟ್ಯೂಬ್ ಲೈಟ್'?

Update: 2017-05-17 11:35 IST

ಭಾರತೀಯ ಚಿತ್ರರಂಗದಲ್ಲಿ ‘ಬಾಹುಬಲಿ-2’ ಅಧಿಕ ಗಳಿಕೆ ಮೂಲಕ ಬಾಕ್ಸ್ ಆಪೀಸನ್ನು ಕೊಳ್ಳೆಹೊಡೆದಿದೆ. 1,000 ಕೋಟಿ ರೂಪಾಯಿ ಗಳಿಕೆಯ ಕ್ಲಬ್ ಸೇರಿರುವ ಜಗತ್ತಿನ ಚಿತ್ರೋದ್ಯಮದಲ್ಲಿ ಒಂದು ದಂತಕತೆಯಾಗಿ ಗುರುತಾಗಿದೆ. ಪ್ರಭಾಸ್ ಅಭಿನಯಕ್ಕೆ ಜನಮನ್ನಣೆ ಸಿಕ್ಕಿದರೆ, ರಾಜಮೌಳಿ ಕೀರ್ತಿ ಜಗತ್ತಿನ ಉದ್ದಗಲಕ್ಕೂ ಪಸರಿಸಿದೆ. 

ಸದ್ಯ ‘ಬಾಹುಬಲಿ’ ಕ್ಯೂರಿಯಾಸಿಟಿ ತಣ್ಣಗಾಗಿದೆ. ಈಗ ಸಲ್ಮಾನ್ ಖಾನ್ ಅಭಿನಯದ ‘ಟ್ಯೂಬ್ ಲೈಟ್’ ಸರದಿ. ಬಾಲಿವುಡ್ ಗಣ್ಯರ ವಿಶ್ಲೇಷಣೆ ಪ್ರಕಾರ ಸಲ್ಮಾನ್ ಖಾನ್ ಅಭಿನಯದ ‘ಟ್ಯೂಬ್ ಲೈಟ್’, ‘ಬಾಹುಬಲಿ-2’ ಚಿತ್ರದ ದಾಖಲೆಗಳನ್ನು ಮುರಿಯಲಿದೆಯಂತೆ.

ಈವರೆಗೂ ‘ದಂಗಲ್’ ಚಿತ್ರ ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಗಳಿಕೆಯ ಚಿತ್ರ ಎನಿಸಿತ್ತು. ‘ಬಾಹುಬಲಿ’ ತೆರೆಗೆ ಬಂದಿದ್ದೇ ತಡ ಎಲ್ಲಾ ದಾಖಲೆಗಳನ್ನು ಮುರಿದು ತನ್ನದೇ ಪಾರುಪತ್ಯ ಮರೆಯಿತು. ಇದೀಗ ಈ ಎರಡೂ ಚಿತ್ರಗಳನ್ನು ಮೀರುವ ಸಾಧ್ಯತೆಗಳಿವೆಯಂತೆ ‘ಟ್ಯೂಬ್ ಲೈಟ್’. ಬಾಲಿವುಡ್ ನ ಮಾರುಕಟ್ಟೆ ವಿಶ್ಲೇಷಕರು ಈ ಕುರಿತಂತೆ ಕುತೂಹಲಕಾರಿ ಭವಿಷ್ಯವನ್ನು ಹೇಳಿಕೊಳ್ಳುತ್ತಿದ್ದಾರೆ. ‘ಟ್ಯೂಬ್ ಲೈಟ್’ ಸೈನಿಕರ ಬದುಕಿನತ್ತ ಬೆಳಕು ಚೆಲ್ಲುವ ಚಿತ್ರ. ಕಬೀರ್ ಖಾನ್ ನಿರ್ದೇಶನದ ಈ ಚಿತ್ರ ಇದೀಗ ನೂರಾರು ಕೋಟಿ ರೂಪಾಯಿಗಳಿಗೆ ವಿತರಣಾ ಹಕ್ಕನ್ನು ಮಾರಾಟ ಮಾಡಿದೆ.

ಒಂದು ಮೂಲಗಳ ಪ್ರಕಾರ ಎನ್.ಎಚ್. ಸ್ಟುಡಿಯೋ 100 ಕೋಟಿ ರೂಪಾಯಿಗೆ ವಿತರಣಾ ಹಕ್ಕನ್ನು ಖರೀದಿಸಿದೆ. ಅಷ್ಟೇ ಅಲ್ಲ ಪ್ರಸಾರದ ಹಕ್ಕು ಸೇರಿದಂತೆ ವಿವಿಧ ಮೂಲಗಳಿಂದಲೂ ಈಗಾಗಲೇ ನೂರಾರು ಕೋಟಿ ರೂಪಾಯಿಗಳ ಆದಾಯ ಪೇರಿಸಿರುವ ‘ಟ್ಯೂಬ್ ಲೈಟ್’ಗೆ ಮುಂದಿನ ದಿನಗಳಲ್ಲಿ ಇದರ ದುಪ್ಪಟ್ಟು ಆದಾಯ ಗಳಿಸುವುದು ಕಷ್ಠ ಸಾಧ್ಯವಲ್ಲ ಎಂಬುದು ತಜ್ಞರ ಅಭಿಮತ.

‘ಟ್ಯೂಬ್ ಲೈಟ್’ ಚಿತ್ರ ಬಿಡುಗಡೆಗೆ ಇನ್ನೂ ಒಂದೂವರೆಗ ತಿಂಗಳುಗಳಿವೆ. ಅಷ್ಟೊತ್ತಿಗೆ ಅನೇಕಾನೇಕ ಡೀಲ್ ಗಳು ಪೂರ್ಣಗೊಳ್ಳಲಿವೆ. ಒಂದು ಅಂಕಿ-ಅಂಶಗಳ ಪ್ರಕಾರ ಸಲ್ಮಾನ್ ಖಾನ್ ಅಭಿನಯದ ‘ಟ್ಯೂಬ್ ಲೈಟ್’’ ಚಿತ್ರ ಬಿಡುಗಡೆಗೆ ಮುನ್ನವೇ 500 ಕೋಟಿ ರೂಪಾಯಿಗಳ ಆದಾಯ ಪೇರಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಈ ಚಿತ್ರ ಹಲವು ವೈಶಿಷ್ಟ್ಯಗಳನ್ನು ಹೊಂದಿದೆಯಂತೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದರೆ, ಶಾರೂಖ್ ಖಾನ್ ಅವರ ಧ್ವನಿ ಪ್ರತಿಧ್ವನಿಸಿದೆ. ಈ ಇಬ್ಬರು ಖಾನ್ ದ್ವಯರ ಸಹಭಾಗಿತ್ವ ಹಿಂದಿ ಚಿತ್ರರಂಗದಲ್ಲಿ ಹೊಸ ಪ್ರಯೋಗ ಎನ್ನುತ್ತಿದ್ದಾರೆ ‘ಟ್ಯೂಬ್ ಲೈಟ್’ ನಿರ್ದೇಶಕ ಕಬೀರ್. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News