ಹಾಲಿವುಡ್'ನ್ನೂ ಬಿಡದ ವೈರಸ್; ದುಬಾರಿ ಚಿತ್ರ ಕದ್ದ ಹ್ಯಾಕರ್ಸ್

Update: 2017-05-17 09:47 GMT

ಎಟಿಎಂಗಳಿಗೆ ಲಗ್ಗೆ ಹಾಕಿ ಬ್ಯಾಂಕಿಂಗ್ ವಹಿವಾಟನ್ನೇ ನಿಗೂಢ ವೈರಸ್ ಅಯೋಮಯ ಮಾಡಿದ್ದಲ್ಲ, ಹಾಲಿವುಡ್ ಗೂ ಲಗ್ಗೆ ಹಾಕಿ ಚಿತ್ರೋದ್ಯಮವನ್ನೂ ತಲ್ಲಣಗೊಳಿಸಿದೆ. ದುಬಾರಿ ಸಿನಿಮಾಗಳನ್ನೂ ಸೈಬರ್ ಹ್ಯಾಕರ್ಸ್ ಕದ್ದು ಬ್ಲ್ಯಾಕ್ಮೇಲ್ ತಂತ್ರ ಅನುಸರಿಸುತ್ತಿದ್ದಾರೆ. 

ಆತಂಕಕಾರಿ ಸುದ್ದಿಯೊಂದು ಹಾಲಿವುಡ್ ನಲ್ಲೂ  ಪ್ರತಿಧ್ವನಿಸಿದ್ದು, ಜಗತ್ತಿನ ಶ್ರೇಷ್ಠ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗುತ್ತದೆ ಎಂದು ನಿರೀಕ್ಷಿಸಲ್ಪಟ್ಟಿರುವ 'ಪೈರೆಟ್ ಆಫ್ ದಿ ಕೆರಿಬಿಯನ್-5' ಚಿತ್ರ ಹ್ಯಾಕರ್ ಗಳ ಕಪಿಮುಷ್ಠಿಯಲ್ಲಿ ಸಿಲುಕಿದೆ. ಹಾಲಿವುಡ್ ಅತಿ ದುಬಾರಿ ಚಿತ್ರವೆನಿಸಿರುವ 'ಪೈರೆಟ್ ಆಫ್ ದಿ ಕೆರಿಬಿಯನ್-5' ಚಿತ್ರವನ್ನು ಸೈಬರ್ ಗಳ್ಳರು ಕದ್ದಿದ್ದಾರೆ ಎನ್ನಲಾಗಿದೆ. 

ಎಸ್.ಎಲ್. ಸ್ಯಾಂಡ್ ಬರ್ಗ್ ನಿರ್ದೇಶನದ ಈ ಚಿತ್ರವನ್ನು ಸುಮಾರು 2 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮೇ 24ರಂದು ಈ ಚಿತ್ರ ತೆರೆ ಕಾಣಬೇಕಿದ್ದು, ಅದಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ನಿರ್ಮಾಣ ಸಂಸ್ಥೆ ವಾಲ್ಪ್ ಡಿಸ್ನಿಗೆ ಹ್ಯಾಕರ್ಸ್ ಗಳು ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದಾರೆ. ಕೋಟಿಕೋಟಿ ಡಾಲರ್ ಗಳನ್ನು ನೀಡಬೇಕೆಂದು ಪಟ್ಟು ಹಿಡಿದಿರುವ ಸೈಬರ್ ಗಳ್ಳರು ತಮ್ಮ ಬೇಡಿಕೆಗೆ ಮಣಿಯದಿದ್ದರೆ ಚಿತ್ರವನ್ನು ಬಹಿರಂಗಪಡಿಸುವುದಾಗಿ ಬೆದರಿಕೆವೊಡ್ಡಿದ್ದಾರೆ. ಹ್ಯಾಕರ್ ಗಳ ಬೆದರಿಕೆಯನ್ನು ಸವಾಲಾಗಿ ಸ್ವೀಕರಿಸುವ ಚಿತ್ರತಂಡ ಎಫ್.ಬಿ.ಐ. ತನಿಖಾ ತಂಡದ ಮೊರೆಹೋಗಿದೆ. 

ಈ ಹಿಂದೆ ನಾಲ್ಕು ಸರಣಿಗಳಲ್ಲಿ ತೆರೆ ಕಂಡಿದ್ದ 'ಪೈರೆಟ್ ಆಫ್ ದಿ ಕೆರಿಬಿಯನ್' ಚಿತ್ರ ಹಾಲಿವುಡ್ ಕ್ಷೇತ್ರದಲ್ಲಿ ಮೇನಿಯಾ ಸೃಷ್ಟಿಸಿತ್ತು. ಅದರ ಯಶಸ್ಸಿನಲ್ಲೇ ಇದೀಗ 'ಪೈರೆಟ್ ಆಫ್ ದಿ ಕೆರಿಬಿಯನ್-5' ಚಿತ್ರವನ್ನು ನಿರ್ಮಿಸಿದೆ. 'ಪೈರೆಟ್ ಆಫ್ ದಿ ಕೆರಿಬಿಯನ್-5' ಬಿಡುಗಡೆ ಕಾಣುವ ಮುನ್ನವೇ ಕಳ್ಳರ ಕಪಿಮುಷ್ಠಿಯಲ್ಲಿ ಸಿಲುಕಿದೆ. 

ಈ ರಾನ್ಸಮ್ ದಾಳಿ ಜಗತ್ತಿನ 150ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ  ತಲ್ಲಣದ ತರಂಗವನ್ನೇ ಎಬ್ಬಿಸಿವೆ. ಆತಂಕಕಾರಿ ವೈರಸ್  ಕೇವಲ ಬ್ಯಾಂಕಿಂಗ್ ಕ್ಷೇತ್ರಕ್ಕಷ್ಟೇ ಅಲ್ಲ, ಸರ್ಕಾರಿ ಇಲಾಖೆಗಳ ಕಂಪ್ಯೂಟರ್ ಗಳಿಗೂ ರಾನ್ಸಮ್ ದಾಳಿ ನಡೆದಿದ್ದು, ಒಂದು ಅಂದಾಜಿನ ಪ್ರಕಾರ 2 ಲಕ್ಷಕ್ಕೂ ಹೆಚ್ಚು ಕಂಪ್ಯೂಟರ್ ಗಳನ್ನು ಹ್ಯಾಕರ್ ಗಳು ಅಪ್ರೋಕ್ಷಣೆ ತೆಗೆದುಕೊಂಡಿದ್ದಾರೆನ್ನಲಾಗಿದೆ.  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News