ಪವರ್ ಸ್ಟಾರ್ ಟ್ವಿಟ್ಟರ್ ಖಾತೆಗೂ ಕನ್ನ ಹಾಕಿದ ಹ್ಯಾಕರ್ಸ್

Update: 2017-05-17 13:20 GMT

ಹೊಸದಿಲ್ಲಿ, ಮೇ 17:  ಜಗತ್ತಿನ ಹಲವಾರು ರಾಷ್ಟ್ರಗಳ ನೂರಾರು  ಕಂಪ್ಯೂಟರ್ ಗಳ  ತಂತ್ರಾಂಶಗಳನ್ನು  ಬಲಿತೆಗೆದುಕೊಂಡಿರುವ  ಸೈಬರ್ ಹ್ಯಾಕರ್ಸ್ ಚಿತ್ರರಂಗಕ್ಕೂ ಕನ್ನ ಹಾಕಿದ್ದಾರೆ. ಬಾಲಿವುಡ್ ಸೇರಿದಂತೆ ಅನೇಕ ಚಿತ್ರೋದ್ಯಮದ ಪ್ರಮುಖರ ಕಂಪ್ಯೂಟರ್ ಗಳಿಗೆ ಅಡ್ಡೆಗಳಿಗೆ ಲಗ್ಗೆ ಹಾಕಿರುವ ಹ್ಯಾಕರ್ಸ್   ಇದೀಗ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಟ್ವಿಟ್ಟರ್ ಖಾತೆಯನ್ನೂ ಹ್ಯಾಕ್ ಮಾಡಿದ್ದಾರೆ.

ಈ ಬಗ್ಗೆ  ಪವನ್ ಕಲ್ಯಾಣ್ ಅವರಿಗೆ ತಕ್ಷಣವೇ ಗೊತ್ತಾಗಿದ್ದರಿಂದ ಅವಾಂತರದಿಂದ ಪಾರಾಗಿದ್ದಾರೆ.  ತಮ್ಮ ಸರ್ವರ್ ಗೆ ಲಗ್ಗೆ ಹಾಕಿರುವ  ರಾನ್ಸಮ್ ವೈರಸ್ ಕಂಪ್ಯೂಟರನ್ನು ಆವರಿಸಿಕೊಂಡಿದೆ ಎಂಬ ಕಳವಳಕಾರಿ ಸಂಗತಿಯನ್ನು ಪವನ್ ಕಲ್ಯಾಣ್ ಅವರೇ ಬಹಿರಂಗಪಡಿಸಿದ್ದಾರೆ. ಆದರೆ, ಕಂಪ್ಯೂಟರ್ ನಿಂದ  ಹಾಗೂ ತಮ್ಮ ಅಕೌಂಟ್ ಗಳಿಂದ ಯಾವ ಮಾಹಿತಿಗಳು  ಕಳವಳವಾಗಿವೆ  ಅಥವಾ ನಾಶವಾಗಿವೆ  ಎಂಬ ಬಗ್ಗೆ ತಕ್ಷಣಕ್ಕೆ  ಗೊತ್ತಾಗುತ್ತಿಲ್ಲ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News