×
Ad

ದಂಗೆ,ಹಲ್ಲೆ ಪ್ರಕರಣ: ಆಪ್ ಶಾಸಕನ ವಿರುದ್ಧ ವಿಚಾರಣೆ ಪ್ರಕ್ರಿಯೆ

Update: 2017-05-17 19:06 IST

 ಹೊಸದಿಲ್ಲಿ,ಮೇ 17: 2015ರ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭ ದಂಗೆ, ದಿಗ್ಬಂಧನ ಮತ್ತು ಹಲ್ಲೆ ಪ್ರಕರಣದಲ್ಲಿ ನಗರದ ಸದರ್‌ಬಝಾರ್ ಕ್ಷೇತ್ರದ ಆಪ್ ಶಾಸಕ ಸೋಮದತ್ ವಿರುದ್ಧ ವಿಚಾರಣೆ ನಡೆಸಲು ದಿಲ್ಲಿಯ ಮಹಾನಗರ ನ್ಯಾಯಾಲಯವು ಬುಧವಾರ ನಿರ್ಧರಿಸಿತು.

ತಾನೇನೂ ತಪ್ಪು ಮಾಡಿಲ್ಲ ಮತ್ತು ವಿಚಾರಣೆಯನ್ನು ಎದುರಿಸಲು ಸಿದ್ಧ ಎಂದು ದತ್ ತಿಳಿಸಿದ ಬಳಿಕ ನ್ಯಾಯಾಲಯವು ಅವರ ವಿರುದ್ಧ ಆರೋಪಗಳನ್ನು ರೂಪಿಸಿತು. ದೂರುದಾರ ಸಂಜೀವ ರಾಣಾಗೆ ಸಮನ್ಸ್ ಹೊರಡಿಸಿದ ನ್ಯಾ.ರೂಬಿ ನೀರಜಕುಮಾರ್ ಅವರು ವಿಚಾರಣಾ ದಿನಾಂಕವನ್ನು ಜು.27ಕ್ಕೆ ನಿಗದಿಗೊಳಿಸಿದರು.

ದತ್ ವಿರುದ್ಧದ ಆರೋಪ ಸಾಬೀತಾದರೆ ಗರಿಷ್ಠ ಏಳು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News